ಸ್ಪರ್ಧಾ ಕಾರ್ಯಕ್ರಮ

ಧಾರವಾಡ,ಜು17: ಶ್ರೀ ಮಹದೇವಪ್ಪ ಬಸಲಿಂಗಪ್ಪ ಹಳ್ಳಿ ಪ್ರಥಮ ದರ್ಜೆ ಕಾಲೇಜು, ಅಣ್ಣಿಗೇರಿಯಲ್ಲಿ, ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿನಿಯರಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ನೈಲ್ ಆರ್ಟ್, ಮೆಹಂದಿ, ಕೇಶ್ ವಿನ್ಯಾಸ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಎಲ್ಲಾ ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಸಂಯೋಜಕರಾದ ವಿಜಯಲಕ್ಷ್ಮಿ ಪಾಟೀಲ ಅವರು, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುತ್ತವೆ ಮತ್ತು ತಮ್ಮ ಪ್ರತಿಭೆ ಗುರುತಿಸಿಕೊಳ್ಳಲು ನೆರವಾಗುತ್ತವೆ ಎಂದು ತಮ್ಮ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.
ಶ್ರೀಮತಿ ದಿಲ್‍ಶಾದ ನದಾಫ್ ಅವರು ಮುಖ್ಯ ಅತಿಥಿಗಳಾಗಿದ್ದರು. ಮೋತಿಲಾಲ್ ರಾಥೋಡ್, ಪ್ರಾಂಶುಪಾಲರು ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಈ ದೇಶದ ಪ್ರಗತಿಗೆ ಅವರ ಕೊಡುಗೆ ಬಹಳ ಅವಶ್ಯವಾಗಿದೆ ಎಂದರು.
ಮಹಿಳಾ ಘಟಕ ದ ಸದಸ್ಯರಾದ ಶ್ರೀಮತಿ ಕೀರ್ತಿ ಕಳ್ಳೇರ ಮತ್ತು ಶ್ರೀಮತಿ ಶೋಭಾ ವೇದಿಕೆ ಹಂಚಿಕೊಂಡರು. ಶ್ರೀಧರ ಲೋಣಕರ್ ವಂದನಾರ್ಪಣೆ ಮಾಡಿದರು. ಡಾ. ಎಫ.ಬಿ ಆನಿ ,ಡಾ. ಅನ್ನಪ್ಪ ರೂಟ್ಟಿಗವಾಡ ಮತ್ತು ಎಲ್ಲಾ ಸಿಬಂದ್ದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.