ಸ್ಪರ್ಧಾತ್ಮಕ ಪರೀಕ್ಷೆಗೆ ದೂರದೃಷ್ಟಿ ,ಆತ್ಮವಿಶ್ವಾಸ ಅತ್ಯಗತ್ಯ

ಭಾಲ್ಕಿ:ಸೆ.3:ಸ್ಪರ್ಧಾತ್ಮಕ ಪರೀಕ್ಷೆಯು ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಅವಶ್ಯಕ. ಶಿಕ್ಷಣದಂತೆ ಅದನ್ನು ಕಲಿಯಲು ದೂರದೃಷ್ಟಿ ಹಾಗೂ ಆಸಕ್ತಿ, ಆತ್ಮವಿಶ್ವಾಸ ಅತ್ಯಗತ್ಯ ಎಂದು ಸಿ ಬಿ ಪದವಿ ಕಾಲೇಜಿನ ರಾಜ್ಯಶಾಸ್ರ್ತದ ಪ್ರಾಧ್ಯಾಪಕಿ ಆರತಿ ಪಾತ್ರೆ ಅಭಿಪ್ರಾಯಪಟ್ಟರು. 
ಪಟ್ಟಣದ ಸ್ಪರ್ಧಾಕಿರಣ ಕರಿಯರ್ ಅಕಾಡೆಮಿ ಯಲ್ಲಿ ಟಿಇಟಿ ಕೋರ್ಸಿನ ಮುಕ್ತಾಯದ ಸಮಾರಂಭದಲ್ಲಿ ಮಾತನಾಡಿ ಪದವಿಧರ ಶಿಕ್ಷಕರ ನೇಮಕಾತಿಗೆ ಪ್ರಥಮವಾಗಿ ಟಿ.ಇ.ಟಿ ಪರೀಕ್ಷೆಯು ಅರ್ಹತಾ ಪರೀಕ್ಷೆಯಾಗಿದ್ದು, ಉತ್ತೀರ್ಣವಾಗುವುದು ಅವಶ್ಯಕವಿದೆ. ಈ ತರಬೇತಿ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಚಂದ್ರಕಾಂತ ತಳವಾಡೆ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಪೈಪೆÇೀಟಿ ಅಧಿಕ. ಕಠಿಣ ಪರಿಶ್ರಮ, ಗುಂಪು ಚರ್ಚೆ, ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ವಿಷಯದ ಅನುಭವ ತಿಳಿಯುತ್ತದೆ ಎಂದರು.

ಅಕಾಡೆಮಿಯ ನಿರ್ದೇಶಕ ಮಿಲಿಂದ ಮುಳೆ ಮಾತನಾಡಿ ಸತತ ಅಭ್ಯಾಸ ಗೆಲುವಿಗೆ ಕಾರಣವಾಗುತ್ತದೆ.  ವಿಷಯವನ್ನು ಪುನರ್ಮನನ, ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.

ವಾಣಿ, ಅಶ್ವಿನಿ, ಪಂಚಶೀಲ ತಮ್ಮಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಉಪನ್ಯಾಸಕರಾದ ದಯಾಸಾಗರ ಬಿಡವೆ, ವಿರೇಶ್ ಲಿಗಾಡೆ, ಜ್ಯೋತಿ ಬಾಭೋಸ್ಲೆ, ಮಂಜುನಾಥ.ಬಿ, ಉಪಸ್ಥಿತರಿದ್ದರು.

ನಿರೂಪಣೆಯನ್ನು ದಯಾನಂದ.ಬಿ , ವಂದನಾರ್ಪಣೆಯನ್ನು ಭಜರಂಗ ನೆರವೇರಿಸಿದರು.