ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ

ಚಿತ್ರದುರ್ಗ, ಜೂ. 9 – ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಂದು ಆಂಧ್ರಪ್ರದೇಶದ ನಂದ್ಯಾಲದ ಶ್ರೀ ಗುರು ರಾಘವೇಂದ್ರ ಬ್ಯಾಂಕಿAಗ್ ಕೋಚಿಂಗ್ ಕೇಂದ್ರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳು ಬ್ಯಾಂಕಿAಗ್ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ ನಡೆಯಿತು.ಕೇಂದ್ರದ ಅಧ್ಯಕ್ಷ ಡಾ. ಪಿ. ದಸ್ತಗಿರಿ ರೆಡ್ಡಿಯವರು ಕಾಲೇಜಿನ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಯಶಸ್ವಿಯಾಗಿ ಉದ್ಯೋಗವನ್ನು ಪಡೆಯುವ ಬಗ್ಗೆ ವಿಶೇಷವಾದ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ 35ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಅಧ್ಯಯನ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂಸ್ಥೆಯ ಮಾರ್ಗದರ್ಶನದಲ್ಲಿ 39626 ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿರುತ್ತಾರೆ.ಕಾಲೇಜಿನ ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಚಾರ್ಯರಾದ ಪ್ರೊ. ಹೆಚ್.ಕೆ. ಶಿವಪ್ಪ ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಬಿ.ಎಂ. ಸ್ವಾಮಿ ಉಪಸ್ಥಿತರಿದ್ದರು.ಪ್ರೊ. ಟಿ.ಎನ್. ರಜಪೂತ್, ಸಂಯೋಜಕರು, ಉದ್ಯೋಗಕೋಶ ವಿಭಾಗ ಇವರು ವಂದಿಸಿದರು.