ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಮಾನ್ವಿ,ಫೆ.೨೮-
ಕಲ್ಯಾಣ ಕರ್ನಾಟಕ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಏಕಲವ್ಯ ಕರಿಯರ್ ಅಕಾಡೆಮಿ ವತಿಯಿಂದ ೪ ತಿಂಗಳು ಉಚಿತ ತರಬೇತಿಯನ್ನು ಮಾನವಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಏಕಲವ್ಯ ಕರಿಯರ್ ಅಕಾಡೆಮಿಯ ನಿರ್ದೇಶಕರು ಹೇಳಿದರು.
ಉಚಿತ ತರಬೇತಿಗೆ ಪ್ರವೇಶಗಳು ಮಾರ್ಚ್ ೧ ರಂದು ಆರಂಭವಾಗಲಿದ್ದು , ಪ್ರವೇಶ ಪಡೆಯಲು ಕೊನೆಯ ದಿನಾಂಕ ಮಾರ್ಚ್ ೮ ಆಗಿರುತ್ತದೆ. ತರಗತಿಗಳು ಮಾರ್ಚ್ ೧೦ ರಂದು ಆರಂಭಗೊಳ್ಳಲಿದೆ. ಪಿ.ಎಸ್.ಐ, ಪಿ.ಡಿ.ಓ , ಕಾರ್ಯದರ್ಶಿ- ಗ್ರೇಡ್ ೧&೨ ಎಸ್.ಎಸ್.ಸಿ, ಪೋಲಿಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ: ೮೯೭೧೦೨೯೪೧೮, ೮೬೧೮೦೧೫೦೧೭ ಸಂಪರ್ಕಿಸಬಹುದು.