ಸ್ಪರ್ಧಾತ್ಮಕ ಪರೀಕ್ಷಗಳಿಗೆ ಉಚಿತ ತರಬೇತಿ ಶಿಬಿರ

ಕೋಲಾರ,ಜೂ.೧೭- ಕೆ.ಎ.ಎಸ್.ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ, ಪಿಡಿಒ, ಗ್ರೂಪ್ ಸಿ, ಗ್ರೂಪ್ ಡಿ, ಎಸ್.ಎಸ್.ಸಿ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಕೋಲಾರದ ಹಳೇ ಅಂಚೆ ಕಛೇರಿ ರಸ್ತೆ ಕಾಳಮ್ಮ ಗುಡಿ ಬೀದಿಯಲ್ಲಿರುವ ಅಚೀವರ್‍ಸ್ ಇಂಗ್ಲೀಷ್ ಅಕಾಡೆಮಿ ಸ್ಪರ್ಧಾತ್ಮಕ ತರಬೇತಿ ಕಚೇರಿಯಲ್ಲಿ ಜೂ ೧೭ ರಿಂದ ಉಚಿತ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ವಿಳಾಸದ ಕಚೇರಿಗೆ ಬೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರದಲ್ಲಿ ತರಬೇತಿ ಪಡೆದ ಚಿನ್ಮಯಿ ಹೆಚ್.ಎನ್., ಹರ್ಷಿತ, ಬಿ.ಎಂ. ಶ್ವೇತ, ಖುಷಿ ಕೆ.ಎಂ. ಮೌನಿಕ ಎಲ್.ಎಂ. ೫ ಜನ ಶಿಭಿರಾರ್ಥಿಗಳು ಇತ್ತೀಚೆಗೆ ನಡೆದ ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್ (ಎಸ್.ಎಸ್.ಸಿ.) ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ನೇಮಕಾತಿ ಪ್ರಕ್ರಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸುದರ್ಶನೆ.ಎಸ್. ವ್ಯವಸ್ಥಾಪಕ ನಿರ್ದೇಶಕರು, ೭೯೭೫೫೪೯೯೧೨. ಸಂಪರ್ಕಿಸಬಹುದಾಗಿದೆ.