
ಬಾದಾಮಿ,ಏ9::ತಾಲೂಕಿನ ಜಾಲಿಹಾಳ ಗ್ರಾಮದ ಶ್ರೀ ಸಿದ್ದೇಶ್ವರ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಾಂತಗೌಡ ಪಾಟೀಲ ಅವರ ಆರ್ಥಿಕ ಸಹಾಯದಿಂದ ಪದವೀಧರ ಪ್ರತಿಭಾವಂತ 100 ವಿದ್ಯಾರ್ಥಿಗಳಿಗೆ ಕೆ.ಎ.ಎಸ್, ಪಿ.ಎಸ್.ಐ, ಪೆÇೀಲೀಸ್, ಎಫ್.ಡಿ.ಎ, ಎಸ್.ಡಿ.ಎ ಮತ್ತು ಪಿಡಿಓ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಚಂದ್ರಶೇಖರ ಕಾಳನ್ನವರ, ಭೀಮನಗೌಡ ಪಾಟೀಲ ತಿಳಿಸಿದರು.
ಅವರು ನಗರದ ಕಾನಿಪ ಭವನದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಾದಾಮಿ ಮತ್ತು ಗುಳೇದಗುಡ್ಡ ತಾಲೂಕಿನ 100 ಅರ್ಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಣ ಕಾಶಿ ಧಾರವಾಡದ ಸಂಕಲ್ಪ ಕೋಚಿಂಗ ಸೆಂಟರ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಉಚಿತ ತರಬೇತಿ ವ್ಯವಸ್ಥೆ ಮಾಡಲಾಗುವುದು.
ಅರ್ಹ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಪಡೆಯಲು ತಮ್ಮ ಹೆಸರನ್ನು ಎ.10 ರೊಳಗೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನಗರದ ಕಾಲೇಜ್ ರಸ್ತೆಯಲ್ಲಿರುವ ಪೂರ್ಣಿಮಾ ಸಿ.ಎಸ್.ಸಿ ಸೆಂಟರ ಮೊ:9964915488, 9448446321 ಕರೆ ಮಾಡುವ ಮೂಲಕ ಅಥವಾ ಖುದ್ದಾಗಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಎ.11 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಕುಮಾರೇಶ್ವರ ಸಭಾಭವನದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಪ್ರವೇಶ ಪರೀಕ್ಷೆ ಮತ್ತು ಒಂದು ದಿನ ಕಾರ್ಯಾಗಾರ ನಡೆಯಲಿದೆ. ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಅತಿ ಹೆಚ್ಚು ಅಂಕವನ್ನು ಪಡೆದ 100 ವಿದ್ಯಾರ್ಥಿಗಳಿಗೆ ಧಾರವಾಡದಲ್ಲಿರುವ ಸಂಕಲ್ಪ ಕೋಚಿಂಗ್ ಸೆಂಟರ್ ಅವರಲ್ಲಿ ಕೋಚಿಂಗ್ ಫೀ ಉಚಿತದೊಂದಿಗೆ ತರಬೇತಿ ಕೊಡಿಸಲಾಗುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಭೂತಾಳಿ, ಬೆಲೂರಪ್ಪ ವಡ್ಡರ, ಪುಲಕೇಶಿ ಸೂಳಿಕೇರಿ, ಹುಚ್ಚಪ್ಪ ಬೆಳ್ಳಿಗುಂಡಿ ಹಾಜರಿದ್ದರು.