ಸ್ಪಂದಿಸುವ ಗುಣ ಪ್ರತಿಯೊಬ್ಬರೂ ಬೆಳಸಿಕೊಳ್ಳಿ ಪೆÇ್ರ.ಕೆ.ಬಿ.ಗುಡಸಿ


ಧಾರವಾಡ ಎ08-: ಸುತ್ತಮುತ್ತಲಿನ ಆಗುಹೋಗುಗಳಿಗೆ ಪ್ರತಿಯೊಬ್ಬರು ಸ್ಪಂದಿಸುವ ಗುಣ ಬೆಳಸಿಕೊಂಡಾಗ ಮಾತ್ರ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಕವಿವಿ ಕುಲಪತಿ ಪೆÇ್ರ.ಕೆ.ಬಿ.ಗುಡಸಿ ಹೇಳಿದರು.
ನಗರದ ಕವಿವಿ ಸಿನೆಟ್ ಸಭಾ ಭವನದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಅವರ 114ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ. ಡಾ.ಬಾಬು ಜಗಜೀವನ ರಾಮ್ ನಂತಹ ಮಾಹಾನ ವ್ಯಕ್ತಿಗಳ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ, ಅವಕಾಶಗಳಲ್ಲಿ ಭೇದ-ಭಾವ ಮಾಡದೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಕಠಿಣ ಪರಿಶ್ರಮ ಇದ್ದಾಗ ಮಾತ್ರ ಮುಂದೆ ಬರಲು ಸಾದ್ಯ, ಮಾಡುವ ಕೆಲಸವನ್ನು ಶಿಸ್ತು ಬದ್ಧವಾಗಿ ಮಾಡವುದರ ಜೊತೆಗೆ ನಮ್ಮಲ್ಲಿರುವ ಶಕ್ತಿಯನ್ನು ಹೊರಹಾಕಬೇಕು ಅಂದಾಗ ಮಾತ್ರ ಸಮಾಜ ನಾವಿದ್ದಲ್ಲಿ ಬರತ್ತದೆ, ಸಮಾಜದ ಋಣ ತೀರಿಸುವ ಕೆಲಸ ಎಲ್ಲರು ಮಾಡಬೇಕು ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸಾಮಾಜಿಕ ಕಳಕಳಿಯಿಂದ ಆಚರಿಸಿದಾಗ ಮಾತ್ರ ಅವು ಯಶಸ್ವಿ ಆಗಲು ಸಾಧ್ಯ ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗದ ನಿವೃತ್ತ ಜಂಟಿ ನಿರ್ದೇಶಕ ಪೆÇ್ರ. ಸಿ.ಕೆ.ಮಹೇಶ ಮಾತನಾಡಿ ಜಾತಿ ದೇಶದ ದೊಡ್ಡ ರೋಗವಾಗಿದ್ದು, ದಲಿತರು ಕ್ಷಣ ಕ್ಷಣಕ್ಕೂ ಸಂಘರ್ಷ ಮಾಡಿಕೊಂಡು ಬದುಕಬೇಕಾಗಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿನ ಪ್ರಭುತ್ವ ವ್ಯವಸ್ಥೆಯಾಗಿ ನಿಂತಿದೆ, ಅನ್ಯಾಯ ನೋಡಿ ಸುಮ್ಮನಿರುವುದು ಅನ್ಯಾಯ ಮಾಡಿದಂತೆ ಪ್ರತಿಯೊಬ್ಬರೂ ಡಾ. ಬಾಬು ಜಗಜೀವನ ರಾಮ್ ಕಲ್ಪನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅಥಿತಿ ಬೆಂಗಳೂರು ವಿವಿಯ ಡಾ.ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಪೆÇ್ರ. ಗಂಗಾಧರ ಮಾತನಾಡಿ ಡಾ. ಬಾಬು ಜಗಜೀವನ ರಾಮ್ ಅವರು ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು ಅವರ ಬಗ್ಗೆ ಮಾತನಾಡುವ ಬದಲು ಸಂಶೋಧನೆಯಿಂದ ಮಾತನಾಡಿ ಎಂದರು.
ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಶಿವಶರಣ ಸಿ.ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು ಕಾರ್ಯಕ್ರಮದಲ್ಲಿ ಪೆÇ್ರ. ಗಂಗಾಧರ ಮತ್ತು ಪೆÇ್ರ. ಸಿ.ಕೆ.ಮಹೇಶ ಅವರಿಗೆ ಸನ್ಮಾನ ಮಾಡಲಾಯಿತು. “ರಾಷ್ಟ್ರ ನಿರ್ಮಾಣದಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಪಾತ್ರ ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕವಿವಿಯ ವಿದ್ಯಾರ್ಥಿ ಮೊಹಮ್ಮದ ಕಲಿ. ಪ್ರಥಮ, ರೇಣುಕಾ ಗೊಡಚಿ. ದ್ವಿತೀಯ, ಹನಮಂತ ತಿರಕಪ್ಪನವರ. ತೃತೀಯ ಇವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪೆÇ್ರ. ಆರ್ ಆರ್ ಬಿರಾದಾರ. ಸಿಂಡಿಕೇಟ್ ಸದಸ್ಯರಾದ ಹಂಸವೇಣಿ. ಡಾ.ಸುಧೀಂದ್ರ ದೇಶಪಾಂಡೆ. ವಿವಿಧ ವಿಭಾಗದ ಮುಖ್ಯಸ್ಥರು. ಅಧ್ಯಾಪಕರು. ಅತಿಥಿ ಉಪನ್ಯಾಸಕರು. ಹಾಗೂ ವಿವಿಯ ವಿದ್ಯಾರ್ಥಿಗಳು ಹಾಜರಿದ್ದರು. ಡಾ. ಶಿವಸೋಮಪ್ಪ ನಿಟ್ಟೂರು ನಿರೂಪಿಸಿದರು. ಕವಿವಿ ಮೌಲ್ಯಮಾಪನ ಕುಲಸಚಿವ ಪೆÇ್ರ. ರವೀಂದ್ರನಾಥ ಕದಮ, ವಂದಿಸಿದರು.