ಸ್ಪಂದನ ಸಾವು ವದಂತಿ ಹಬ್ಬಿಸಬೇಡಿ

ಬೆಂಗಳೂರು,ಆ.೭- ಪುತ್ರಿ ಸ್ಪಂದನ ಮರಣೋತ್ತರ ಪರೀಕ್ಷೆ ವರದಿ ಬರುವ ತನಕ ಸುಳ್ಳು ಸುದ್ದಿ, ಊಹಾಪೋಹದ ವಿಷಯ ಹರಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಬಿ,ಕೆ ಹರಿಪ್ರಸಾದ್ ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆ ಪೂರ್ಣಗೊಳ್ಳುವ ತನಕ ಯಾವುದೇ ಕಪೋಲ ಕಲ್ಪಿತ ಸುದ್ದಿ ಪ್ರಸಾರ ಮಾಡಬೇಡಿ, ವರದಿ ಬಂದ ನಂತರ ಏನು ಇದೆಯೋ ಅದನ್ನು ಪ್ರಸಾರ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.ಮಲ್ಲೇಶ್ವರಂನಲ್ಲಿ ಸಹೋದರ ಬಿ.ಕೆ ಶಿವರಾಮ್ ಅವರ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಹರಿಪ್ರಸಾದ್, ನಾಲ್ಕೈದು ಸಹೋದರ ಸಂಬಂಧಿಯೊಂದಿಗೆ ಸ್ಪಂದನ ವಿದೇಶಕ್ಕೆ ಪ್ರವಾಸಕ್ಕೆ ಹೋಗಿದ್ದರು. ಆಗ ಈ ದುರ್ಘಟನೆ ಸಂಭವಿಸಿದೆ ಇದು ನೋವಿನ ಸಂಗತಿ ಎಂದಿದ್ಧಾರೆ.ಚಿತ್ರೀಕರಣ ಇದ್ದುದರಿಂದ ವಿಜಯ್ ರಾಘವೇಂದ್ರ ತಡವಾಗಿ ಹೋಗಿ ನಿನ್ನೆ ಸೇರಿಕೊಂಡಿದ್ದಾರೆ. ರಾತ್ರಿ ಮಲಗಿದಾಗ ಎದ್ದೇಳದಿದ್ದ ಹಿನ್ನೆಲೆಯಲ್ಲಿ ಹೃದಯಾಘಾತವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮೃತಪಟ್ಟಿರುವುದು ವೈದ್ಯರು ಖಚಿತ ಪಡಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ನಾಳೆ ಬೆಂಗಳೂರಿಗೆ ತಂದ ನಂತರ ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಕುಟುಂದಬ ಸದಸ್ಯರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಪಂದನ ಮೊದಲಿನಿಂದಲೂ ವೀಕ್ ಆಗಿದ್ದಳು, ಈ ಘಟನೆ ನೋವಿನ ಸಂಗತಿ ಎಂದು ಹೇಳಿದ್ಧಾರೆ ಬಿ.ಕೆ ಹರಿಪ್ರಸಾದ್ ಅವರ ಸಹೋದರ ಹಾಗು ನಿವೃತ್ತ ಎಸಿಪಿ ಬಿ.ಕೆ ಶಿವರಾಮ್ ಅವರ ಪುತ್ರಿ ಸ್ಪಂಧನ.

ಅತ್ತಿಗೆ ನಿಧನ;ಶ್ರೀಮುರಳಿ
ಅತ್ತಿಗೆ ಸ್ಪಂದನ ನಿಧನರಾಗಿರುವ ವಿಷಯವನ್ನು ಅಣ್ಣ ತಿಳಿಸಿದ್ದಾರೆ ಎಂದು ಸಹೋದರ ಶ್ರೀ ಮುರಳಿ ತಿಳಿಸಿದ್ಧಾರೆ.
ಮಲಗಿದವರು ಎದ್ದೇಳಲಿಲ್ಲ. ಲೋ ಬಿಪಿಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ ಕುಟಂಬ ನೋವಿನಲ್ಲಿದೆ ಎಂದು ಅವರು ತಿಳಿಸಿದ್ದಾರೆ.