ಸ್ನೇಹ ಸಮ್ಮೇಳನ


ನವಲಗುಂದ,ಮಾ.2: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದರ ಜೊತೆಗೆ ವಸತಿ ವಿದ್ಯಾರ್ಥಿಗಳ ಆರೋಗ್ಯ, ಶಿಕ್ಷಣಕ್ಕೆ ಒತ್ತು ಕೊಟ್ಟು ಸಮಾಜದಲ್ಲಿ ಮೌಲ್ಯಯುತ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಯ ಶ್ಲಾಘನೀಯ ಎಂದು ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಸರಸ್ವತಿ ಶಿಕ್ಷಣ ಸಂಸ್ಥೆ, ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿಗಳು ಹಾಗೂ ಹಿರಿಯ ನ್ಯಾಯವಾದಿಗಳಾದ ಎ. ಸಿ. ಚಾಕಲಬ್ಬಿ ಮಾತನಾಡಿದ ಅವರು ಎಲ್ಲ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಸೇವೆ ಇನ್ನಷ್ಟು ಉನ್ನತ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಿರಿ ಎಂಬ ಕಿವಿಮಾತನ್ನು ಹೇಳಿದರು.
ಬಿ.ಜಿ.ಬಿಲ್ ಶಿವಣ್ಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಶಿವಾನಂದ ಕರಿಗಾರ,ನಿಂಗಪ್ಪ ಬಾರಕೇರ, ಜೀವನ ಪವಾರ, ಎಮ್. ಎಚ್. ಚಿಕ್ಕನಾಳ, ಶಂಕರಪ್ಪ ಅಂಬಲಿ, ನಿಂಗಪ್ಪ. ಕುರುಬರ ಮತ್ತಿತರರು ಉಪಸ್ಥಿತರಿದ್ದರು.