ಸ್ನೇಹ ಮಹಿಳಾ ಬಳಗದ ಮಹಿಳೆಯರ ಜೊತೆ ಸಂವಾದ 

ದಾವಣಗೆರೆ.ಏ.೧೯; ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸ್ನೇಹ ಮಹಿಳಾ ಬಳಗದ 80 ಕ್ಕೂ ಹೆಚ್ಚು ಮಹಿಳೆಯರ ಜೊತೆ ಸಂವಾದ ನಡೆಸಿದರು.ಸ್ವತಃ ತಾವೇ ಪ್ರತಿಯೊಬ್ಬರ ಬಳಿ ತೆರಳಿ ನಿಮ್ಮ ನಿರೀಕ್ಷೆಗಳೆನಿದ್ದವು? ನಮ್ಮ ಕೆಲಸ ನಿಮಗೆ ಇಷ್ಟ ಆಗಿಲ್ಲವೇ? ನಿಮ್ಮ ನೇರ ಉತ್ತರಕ್ಕಾಗಿಯೇ ನಾನು ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ ಎಂದು ಎಲ್ಲರನ್ನೂ ಪ್ರಶ್ನೆ ಮಾಡಿದರು.ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ತಮ್ಮ ಅಭಿಪ್ರಾಯ ತಿಳಿಸುತ್ತಾ, ಈ ಬಾರಿ ನಾವುಗಳು ಪಕ್ಷ ನೋಡುವುದಿಲ್ಲ ದಾವಣಗೆರೆ ಅಭಿವೃದ್ಧಿಗಾಗಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ… ಆ ವ್ಯಕ್ತಿಯೇ ಎಸ್.ಎಸ್ ಮಲ್ಲಿಕಾರ್ಜುನ್ ಎಂದು ತಮ್ಮ  ಅಭಿಪ್ರಾಯ ತಿಳಿಸಿದರು.ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪನವರಿಗೆ ನೀಡುವ ಮತ ಮನುಷ್ಯತ್ವಕ್ಕೆ ಹಾಗೂ ಮಾನವೀಯತೆಗೆ ನೀಡುವ ಮತ. ಕೋವಿಡ್ ಸಮಯದಲ್ಲಿ ಅವರು ನೀಡಿದ ಸೇವೆಯನ್ನು ನಾವುಗಳು ಎಂದು ಮರೆಯಬಾರದು ಎಂದು ಹಿರಿಯರೊಬ್ಬರು ಕಿವಿಮಾತು ಹೇಳಿದರು.