ಸ್ನೇಹ-ಭಾವನಾತ್ಮಕ ಸಂಬಂದ ನನ್ನ ಗೆಲುವಿಗೆ ಕಾರಣ:ಶಾಸಕ ರಾಜುಗೌಡ

ತಾಳಿಕೋಟೆ:ಜೂ.20: ಎರಡು ಬಾರಿ ನಾನು ಸೋತರೂ ಮತಕ್ಷೇತ್ರದ ಎಲ್ಲ ಸಮುದಾಯದವರ ಜೊತೆಗೂ ಉತ್ತಮ ಸ್ನೇಹ, ಭಾವನಾತ್ಮಕ ಸಂಬಂಧವನ್ನು ಕಳೆದುಕೊಂಡಿರಲಿಲ್ಲ. ಈ ಸಂಬಂಧ ನನಗೆ ಶಾಸಕನನ್ನಾಗಿ ಜಯದ ಮೆಟ್ಟಿಲೇರಿಸಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.

  ಅವರು ಪಟ್ಟಣದ ಎಂ.ಜಿ.ಎಂ.ಕೆ. ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬಿಪಿಎಲ್(ಬಣಜಿಗ ಮತ್ತು ಪಂಚಮಸಾಲಿ ಲಿಂಗಾಯತ) ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಶಾಸಕರ ಹಾಗೂ ನಿವೃತ್ತರ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ನನ್ನ ವಿಜಯಕ್ಕೆ ಇಡೀ ಜಿಲ್ಲೆ ಹರ್ಷಪಟ್ಟಿದೆ. ಯಾಕೆಂದರೆ ಎಲ್ಲರ ಮನದಲ್ಲಿಯೂ ನಾನು ಎರಡು ಸಲ ಸೋಲುಂಡಿರುವ ಅನುಕಂಪ ಮತ್ತು ಮತ್ತು ನಾನು ಎಲ್ಲರೊಂದಿಗೆ ಬೇರೆತು ಉಳಿಸಿಕೊಂಡಿದ್ದ ಪ್ರೀತಿ-ವಿಸ್ವಾಸ ಭಾವನಾತ್ಮಕ ಸಂಬಂದ ಗೆಲುವಿಗೆ ಗಟ್ಟಿಬುನಾದಿಯಾಗಿತ್ತು ಎಂದ ಅವರು ಎಲ್ಲರ ಮನದಲ್ಲಿಯೂ ರಾಜುಗೌಡ ಗೆಲ್ಲಬೇಕು ಎಂದು ತಮ್ಮ ಕ್ಷೇತ್ರ ಅಲ್ಲದಿದ್ದರೂ ಸಂಬಂದಿಕರಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ಕೆಲವರು ಪೋನಿನ ಮೂಲಕ ಹೇಳಿದ್ದರೆ ಇನ್ನೂ ಕೆಲವರು ತಮ್ಮದೇ ಖರ್ಚಿನಲ್ಲಿ ಹಳ್ಳಿ ಹಳ್ಳಿ ತಿರುಗಾಡಿ ನನ್ನ ಗೆಲವಿಗೆ ಶ್ರೀರಕ್ಷೇಯಾಗಿದ್ದಾರೆ ಅದರ ಜೊತೆಗೆ ಬಿಪಿಎಲ್‍ನೌಕರರ ಸಂಘದವರೂ ಕೂಡಾ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ, ಕರ್ಜಿಗುರುಗಳ ಜೊತೆಯಾಗಿ ಅನೇಕರು ತಮ್ಮ ವಿದ್ಯಾರ್ಥಿಗಳಿಗೆ, ಸಂಬಂದಿಕರಿಗೆ ತಿಳಿ ಹೇಳಿ ಅತ್ಯದಿಕ ಮತಗಳಿಂದ ಗೆಲುವಿಗೆ ಕಾರಣರಾಗಿದ್ದಾರೆಂದ ಅವರು ಬಣಜಿಗರು-ಪಂಚಮಸಾಲಿಗಳು ಎಂಬ ಹೆಸರು ಬೇಡ ಎಲ್ಲರೂ ಒಂದೇ ಎಂಬ ಭಾವನೆ ನಮ್ಮೇಲ್ಲರಲ್ಲಿ ಬರಬೇಕಿದೆ ಇದರಿಂದ ಎಲ್ಲರಂಗದಲ್ಲಿಯೂ ಬೆಳೆಯಲು ಅನುಕೂಲವಾಗಲಿದೆ ಚುನಾವಣೆ ಬಂದಾಗ ಬೇರ್ಪಡುವ ಮಾತು ಬರುವುದು ಬೇಡ ಬಿಪಿಎಲ್ ನೌಕರರ ಸಂಘವನ್ನು ಕಟ್ಟಿಕೊಂಡು ಸಮಾಜಮುಖಿ ಕಾರ್ಯಗಳೊಡನೆ ಸಮಾಜವನ್ನು ಒಗ್ಗೂಡಿಸುವಂತಹ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ ಎಂದರು.
 ನಿವೃತ್ತಿ ಸನ್ಮಾನ ಸ್ವೀಕರಿಸಿದ ಅಧ್ಯಕ್ಷತೆ ವಹಿಸಿದ್ದ ಬಿಪಿಎಲ್ ನೌಕರರ ಸಂಘದ ಅಧ್ಯಕ್ಷ, ಎಸ್.ಕೆ.ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಬಿಪಿಎಲ್ ನೌಕರರ ಸಂಘ ಪ್ರತಿಯೊಬ್ಬರಿಗೂ ಶಕ್ತಿ ತುಂಬುವಂತಹ ಕೆಲಸ ಮಾಡಿದೆ ಶಿಕ್ಷಣ ಸಂಘಟನೆ ಹೋರಾಟ ಎಂಬ ಮನೋಭಾವನೆ ಎಲ್ಲರಲ್ಲಿಯೂ ಬರುವಂತೆ ಮಾಡಿದೆ ನನ್ನ ಅಧ್ಯಕ್ಷ ಅವಧಿಯಲ್ಲಿ ಎಲ್ಲ ನೌಕರರು ಸಾಕಷ್ಟು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಮುಂದೆಯೂ ಕೂಡಾ ನಾನು ಎಲ್ಲರಿಗೂ ಸಹಕಾರ ನೀಡುತ್ತೇನೆಂದರಲ್ಲದೇ ಶಾಸಕ ರಾಜುಗೌಡ ಪಾಟೀಲರು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಿದಂತಹ ವ್ಯಕ್ತಿಯಾಗಿದ್ದಾರೆ ತಾವು ಶಾಸಕರೆಂದು ಅಹಂ ಅವರಲ್ಲಿ ಇಲ್ಲಾ ಶಾಸಕರಾಗುವ ಮುಂಚೆ ಯಾವರೀತಿ ಸಾಮಾನ್ಯರಂತೆ ಇದ್ದರೋ ಈಗೂ ಕೂಡಾ ಅವರು ಹಾಗೆಯೇ ಇದ್ದು ಮುಂದೆ ಅವರ ರಾಜಕೀಯದಲ್ಲಿ ಇನ್ನಷ್ಟು ಎತ್ತರ ಮಟ್ಟಕ್ಕೆ ಬೆಳೆಯಲು ಎಲ್ಲರ ರೀತಿಯಿಂದಲೂ ಅವರಿಗೆ ಸಹಕಾರ ನೀಡೋಣವೆಂದರು.
 ಇನ್ನೋರ್ವ ಸೇವಾ ನಿವೃತ್ತಿ ಹೊಂದಿದ್ದ ಎಸ್.ಕೆ.ಪ್ರೌಢಶಾಲೆಯ ನಿವೃತ್ತ ಉಪಪ್ರಾಚಾರ್ಯ ಎಸ್.ಡಿ.ಕರ್ಜಗಿ ಅವರು ಸನ್ಮಾನ ಸ್ವಿಕರಿಸಿ ಮಾತನಾಡಿ ಶಾಸಕರಾಜುಗೌಡ ಪಾಟೀಲರು ಎಲ್ಲ ಸಮಾಜದವರ ಪ್ರೀತಿ ಬಾಂದವ್ಯಕ್ಕೆ ಹೆಸರಾದಂತಹ ವ್ಯಕ್ತಿಯಾಗಿದ್ದಾರೆ ಒಬ್ಬರು ಶಾಸಕರಾಗಬೇಕೆಂದರೆ ಸಾದ, ವೇದ, ಸಾಮ, ಬೇಡಂ ಒಳಗೊಂಡು ತತ್ವಗಳು ಅವರಲ್ಲಿ ಇರಬೇಕು ಎನ್ನುವದು ಹಿಂದಿನದ್ದಾಗಿತ್ತು ಅದನ್ನೇಲ್ಲವನ್ನು ಮೇಟ್ಟಿ ಜನರ ಮನಸ್ಸಿನಲ್ಲಿ ನಿಶ್ಚಳವಾಗಿ ಉಳಿಯುವಂತೆ ಬಾಂದವ್ಯ ಬೆಳೆಸಿಕೊಂಡು ಶಾಸಕರಾದವರು ರಾಜುಗೌಡರಾಗಿದ್ದಾರೆ ಶಾಸಕ ರಾಜುಗೌಡರು ಎರಡು ಚುನಾವಣೆಗಳಲ್ಲಿ ಅಲ್ಪಮತಗಳಲ್ಲಿ ಸೋತು ಎಲ್ಲ ಆಸ್ತಿ ಅಂತಸ್ತುಗಳನ್ನು ಕಳೆದುಕೊಂಡಿದ್ದರೂ ಆದರೆ ತಮ್ಮ ಚಲವನ್ನು ಬಿಡಲಿಲ್ಲಾ ಮತ್ತೇ ವರ್ಷಗಳ ಕಾಲ ಜನರ ಎಲ್ಲ ಕಷ್ಟ ಕಾರ್ಪಣ್ಯೆಗಳಲ್ಲಿ ಭಾಗಿಯಾಗಿ ಜನರ ಮನಸ್ಸನ್ನು ಗೆಲ್ಲುವಂತಹ ಕೆಲಸ ಮಾಡಿದ್ದರು ಇದರ ಪರಿಣಾಮ ಈ ಭಾರಿ ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಹಣಕ್ಕೆ ಬೆಲೆ ಸಿಗಲಿಲ್ಲಾ ಗುಣವಂತಹ ರಾಜುಗೌಡರು ಶಾಸಕರಾಗಲು ಕಾರಣವಾಗಿದೆ ಎಂದ ಅವರು ತಮ್ಮ ನಿವೃತ್ತಿ ಜೀವನಕ್ಕೂ ಮುಂಚೆ ಬಿಪಿಎಲ್ ನೌಕರರ ಸಂಘದ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆಂದರು.
 ಶಿಕ್ಷಕ ಅಶೋಕ ಹಂಚಲಿ ಪ್ರಸ್ಥಾವಿಕ ಮಾತನಾಡಿದರು. ಇದೇ ಸಮದಯಲ್ಲಿ ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶಾಸಕರಿಗೆ, ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
 ವೇದಿಕೆಯ ಮೇಲೆ ಬಿಪಿಎಲ್ ನೌಕರರ ಸಂಘದ ಗೌರವಾಧ್ಯಕ್ಷ ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಎಂ.ಜಿ.ಎಂ.ಕೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ನಿವೃತ್ತ ಸನ್ಮಾನ ಸ್ವಿಕರಿಸಿದ ಗ್ರಂಥಪಾಲಕ ಪ್ರಭುಗೌಡ ಬಿರಾದಾರ ಇದ್ದರು.
 ಎಸ್.ವಿ.ಜಾಮಗೊಂಡಿ ಸ್ವಾಗತಿಸಿದರು. ಸಂಗಮೇಶ ಪಾಲಕಿ, ಅಶೋಕ ನಿರೂಪಿಸಿದರು. ಕಾಶಿನಾಥ ಬಿರಾದಾರ ವಂದಿಸಿದರು.