ಸ್ನೇಹ ಬಳಗದಿಂದ ಆಹಾರದ ಪಟ್ಟಣಗಳ ವಿತರಣೆ

ದಾವಣಗೆರೆ.ಮೇ.30 : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಖಾಲಿದ್ ಅಹ್ಮದ್ ಹಾಗೂ ಸ್ನೇಹ ಬಳಗದ ವತಿಯಿಂದ ಸತತವಾಗಿ 17ನೇ ದಿನವಾದ ಇಂದು ನಗರದ ರೈಲ್ವೆ ನಿಲ್ದಾಣದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸೈಯದ್ ಖಾಲಿದ್ ಅಹ್ಮದ್,ಮೊಹಮ್ಮದ್ ಜಿಕ್ರಿಯಾ,ರಿಯಾಜುದ್ದೀನ್,ಫಜ್ಲೂರ್ ರಹಮಾನ್,ಮೊಹಮ್ಮದ್ ಫಹೀಮ್,ಮಹಬೂಬ್ ಬಾಷಾ,ಮೊಹಮ್ಮದ್ ರಫೀಕ್,ನವೀನ್ ನಲವಡಿ,  ಮೊಹಮ್ಮದ್ ಝಮೀರ್,  ನದೀಮ್, ನವೀನ್  ನಲವಡಿ,ಜಾಕಿರ್,ಸಂತೋಷ್ ಹಾಗೂ ಇತರರು ಭಾಗವಹಿಸಿದ್ದರು.