ಸ್ನೇಹ ಕೂಟ ಸಮಾರಂಭ

ಕೋಲಾರ,ಡಿ.೭:ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಗೋಪಾಲಗೌಡ ಅವರಿಗೆ ಅಭಿನಂದನೆ ಹಾಗೂ ಸ್ನೇಹಕೂಟ ಸಮಾರಂಭವು ಜಮಾಅತ್ ಕಚೇರಿಯಲ್ಲಿ ಜರುಗಿತು.
ಸಮಾರಂಭದಲ್ಲಿ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಚಿಂತಕ ಹಾಗೂ ಉಪನ್ಯಾಸಕ ಡಾ. ಶಿವಪ್ಪ ಅರಿವು, ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ ನಾಗರಾಜ್ ಹಾಗೂ ನಗರದ ಗಣ್ಯ ವ್ಯಕ್ತಿಗಳು, ಜಮಾಅತ್ ಕಾರ್ಯಕರ್ತರು ಭಾಗವಹಿಸಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಕೋಲಾರ ಜಿಲ್ಲಾ ಸಂಚಾಲಕ ಮುಬಾರಕ್ ಬಾಗಬಾನ ಕಾರ್ಯಕ್ರಮವನ್ನು ನಿರ್ವಹಿಸಿದರು.