ಸ್ನೇಹಿತರೊಂದಿಗೆ ಗ್ರಂಥಾಲಯಗಳಿಗೆ ಬನ್ನಿ: ಜಿ.ಪಂ ಸಿಇಒ ಕರೆ

ಚಿತ್ರದುರ್ಗ.ಜ.೧೧:ಪುಸ್ತಕ ವಿಶ್ವದ ಅತ್ಯುತ್ತಮ ಸ್ನೇಹಿತ. ನಿಜವಾದ ಸ್ನೇಹಿತನು ಪ್ರತಿ ಕಷ್ಟದಲ್ಲೂ ನಮ್ಮನ್ನು ಬೆಂಬಲಿಸುವ ರೀತಿಯಲ್ಲಿ ಅದೇ ರೀತಿ ಪುಸ್ತಕಗಳು ಸಹ ಸ್ನೇಹಿತರಂತೆ ವರ್ತಿಸುತ್ತವೆ. ಸ್ನೇಹಿತರೊಂದಿಗೆ ಗ್ರಂಥಾಲಯಗಳಿಗೆ ಬನ್ನಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ಕರೆ ನೀಡಿದರು.ಚಳ್ಳಕೆರೆ ತಾಲ್ಲೂಕು ನಗರಂಗೆರೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ  ಉದ್ಘಾಟಿಸಿ ಅವರು ಮಾತನಾಡಿದರು.ನಗರಗಳಲ್ಲಿರುವಂತೆ ಗ್ರಾಮೀಣ ಪ್ರದೇಶದಲ್ಲಿಯೂ ಗ್ರಂಥಾಲಯಗಳಿದ್ದು, ವಿದ್ಯಾರ್ಥಿಗಳು, ಯುವಕರು ಹಾಗೂ ಪುಸ್ತಕ ಪ್ರಿಯರು ಗ್ರಂಥಾಲಯಕ್ಕೆ ಭೇಟಿ ನೀಡಿ, ತಮಗೆ ಬೇಕಾದ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆಯನ್ನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿದ್ದು, ಅಲ್ಲಿಯೂ ಸಹ ಃeಚಿಛಿoಟಿ ವಿಶೇಷ ಚೇತನದವರು  ಓದಲು ಸಹ ಅನುವು ಮಾಡಲಾಗಿದೆ. ಜಿಲ್ಲೆಯಲ್ಲಿ 169 ಪಂಚಾಯಿತಿಗಳಲ್ಲಿ ಡಿಜಿಟಲ್ ಲೈಬ್ರರಿಯು ಕಾರ್ಯನಿರ್ವಹಿಸುತ್ತಿವೆ ಎಂದರು.ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಪಿ ಡಿ ಓ ಹಾಗೂ ಸಾರ್ವಜನಿಕರು ಇದ್ದರು.