ಸ್ನೇಹಿತರಿಂದಲೇ ಚಾಕು ಇರಿತ

ಕಲಬುರಗಿ,ಜು.4-ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರೇ ಸ್ನೇಹಿತನೊಬ್ಬನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಇಲ್ಲಿನ ಮದಿನಾ ಕಾಲೋನಿಯಲ್ಲಿ ನಡೆದಿದೆ.
ಇಕ್ಬಾಲ್ ಕಾಲೋನಿಯ ಮಹ್ಮದ್ ಹಸನ್ ತಂದೆ ಮಹೆಬೂಬ್ ಎಂಬ ಯುವಕನಿಗೆ ಆತನ ಇಬ್ಬರು ಸ್ನೇಹಿತರು ಸೇರಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದು, ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಮಹ್ಮದ್ ಹಸನ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾವುದೋ ವಿಷಯಕ್ಕೆ ಮೂವರ ಮಧ್ಯೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮೋಬಿನ್ ಮತ್ತು ಇರ್ಫಾನ್ ಎಂಬುವವರ ವಿರುದ್ಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.