ಸ್ನೇಹಿತನ ಸಾವಿಗೆ ಕಾರಣನಾದ ವ್ಯಕ್ತ ಬಂಧಿಸಿದ ಪೊಲೀಸರು

ಹರಿಹರ.ಜು.೨:  ಚಾನಲ್ಲಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಿಸಾಕಿರುವ ಘಟನೆ ನಗರದ ಹೊರ ವಲಯದಲ್ಲಿರುವ ಶೇರ್ ಪುರ ಗ್ರಾಮದಲ್ಲಿ ನಡೆದಿದೆ 
ನಗರದ ತಗ್ಗಿನಕೇರಿ ನಿವಾಸಿಯಾದ ಅಶ್ವಪತ್ಥ್ ಖಾನ್ (21) ಮೃತ ವ್ಯಕ್ತಿ  ಎಂದು ಗುರುತಿಸಲಾಗಿದೆ.ಕೇಬಲ್ ಆಪರೇಟರ್  ಅಕ್ಬರ್ ಖಾನ್ ಎಂಬುವರ ಮಗ ಕಳೆದ 2ದಿನಗಳಿಂದ ಮನೆಯಲ್ಲಿ ಇಲ್ಲದೆ ಇರುವುದರಿಂದ ಬೇರೆ ಬೇರೆ ಕಡೆಗೆ ಹುಡುಕಾಡಿ  ವಿಚಾರಿಸಿದರು ಪತ್ತೆ ಆಗಿರೋದಿಲ್ಲ ಇಂದು ಬೆಳಿಗ್ಗೆ ಮಗನ ಸ್ನೇಹಿತ ಕೇಳಿದ ಮೇಲೆ ಚಾನಲ್ ವೊಂದರಲ್ಲಿ ಹೆಣವಾಗಿ ಬಿದ್ದ ಸ್ಥಳಕ್ಕೆ ಕರೆದುಕೊಂಡು ಬಂದು ತೋರಿಸಿದ್ದಾರೆಂದು ಮೃತ ತಂದೆ ಹೇಳಿಕೆ ನೀಡಿದ್ದಾರೆ ಸ್ನೇಹಿತನ ಸಾವಿಗೆ ಕಾರಣರಾದ ರೋಷನ್ ತರಗಾರ ಕೆಲಸ ಮಾಡುವ ವ್ಯಕ್ತಿಯನ್ನು ಹರಿಹರ ನಗರ ಠಾಣೆಯ ಪಿಎಸ್ ಐ ಸುನಿಲ್ ತೇಲಿ . ಗ್ರಾಮಾಂತರ ಪಿಎಸ್ ಐ ಡಿ ರವಿಕುಮಾರ್ .ಪೊಲೀಸರು ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ ಮೃತ ಅಶ್ವಪತ್ಥ್ ಖಾನ್   ಮತ್ತು ಸ್ನೇಹಿತ ರೋಷನ್  ಇವರಿಬ್ಬರ ಮಧ್ಯೆ ಯುವತಿ ವಿಚಾರವಾಗಿ ಒಬ್ಬರಿಗೊಬ್ಬರು ಮಾತಿಗೆ ಮಾತು ಬೆಳೆದು ಜೀವವನ್ನು ಬಲಿ ತೆಗೆದುಕೊಳ್ಳುವುದಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ ಎಂದು ತಿಳಿದು ಬಂದಿದೆ.ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಅಧೀಕ್ಷಕರಾದ ನರಸಿಂಹ ವಿ ತಾಮ್ರಧ್ವಜ .ವೃತ್ತ ನಿರೀಕ್ಷಕ ಸತೀಶ್ ಕುಮಾರ್‍  ಯು . ನಗರ ಮತ್ತು ಗ್ರಾಮಾಂತರ ಠಾಣೆಯ ಪಿಎಸ್ ಐ ಗಳಾದ ಡಿ ರವಿಕುಮಾರ್ .ಸುನಿಲ್ ಬಸವರಾಜ ತೇಲಿ .ಪ್ರೊಬೇಶನರಿ ಪಿಎಸೈ ಸಿದ್ದಣ್ಣ. ಕರಿಯಪ್ಪ . ಸತೀಶ್ ಟಿ ವಿ. ಮಂಜುಳಮ್ಮ. ರಮೇಶ್ .ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.