ಸ್ನೇಹಜೀವಿ ಸೌಹಾರ್ದ ಸಹಕಾರಿ ಉದ್ಘಾಟನೆ

ಮುನವಳ್ಳಿ,ಜ12: ಪಟ್ಟಣದ ಶ್ರೀ ಪಂಚಲಿಂಗೇಶ್ವರ ಕಾಂಪ್ಲೆಕ್ಸ್ ನಲ್ಲಿ ಸ್ನೇಹಜೀವಿ ಸೌಹಾರ್ದ ಸಹಕಾರಿ ನಿಯಮಿತ ಸಂಘವನ್ನು ಶ್ರೀ ಮುರುಘೇಂದ್ರ ಶ್ರೀಗಳು ಮತ್ತು ಶ್ರೀ ಮುಕ್ತಾನಂದ ಶ್ರೀಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪಟ್ಟಣವು ಬೆಳೆದಂತೆ ಹಣಕಾಸು ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ಹುಟ್ಟುತ್ತಿವೆ ಇವಗಳ ಲಾಭ ವ್ಯಾಪಾರಸ್ಥರು ಪಡೆಯಬೇಕು ಪಡೆದು ತಾವು ಬೇಳೆದು ಸಂಘಗಳನ್ನು ಬೇಳಸಬೇಕೆಂದು ಆಶಿರ್ವದಿಸಿದರು.
ಸಂಸ್ಥೆಯ ಅಧ್ಯಕ್ಷ ದೇವರಾಜ ಕ್ಯಾತನ್ನವರ, ಉಪಾಧ್ಯಕ್ಷ ಬಸವರಾಜ ಕರೀಕಟ್ಟಿ, ನಿರ್ದೇಶಕರಾದ ಅಡಿವೆಪ್ಪ ಸಿಂಗನ್ನವರ, ಬಸವರಾಜ ಮಾಯಪ್ಪನವರ, ಸಂತೋಷ ಕಳ್ಳಿಮಠ, ಅರ್ಜುನ ದೊಡಮನಿ, ಗಂಗಪ್ಪ ಅಲಮಣ್ಣವರ, ಸದಾಶಿವ ಹೆಬ್ಬಾಳ, ಬೀಮಪ್ಪ ನಾವಿ, ಹಣಮಂತ ಹಿರೇಮೇತ್ರಿ, ಶಂಕ್ರೆವ್ವ ವಾಗೇರಿ, ಸಹನಾ ಜೇವೂರ, ಶಾಂತವ್ವ ಹಟ್ಟಿ, ವಿನೋದಾ ಹನಸಿ, ಗೀತಾ ಕ್ಯಾತನ್ನವರ, ಆನಂದ ಪವಾರ ಸೇರಿದಂತೆ ಸ್ನೇಹಜೀವಿ ಗೆಳೆಯರ ಬಳಗದವರು ಇತರರು ಉಪಸ್ಥಿತರಿದ್ದರು.