ಸ್ನೇಕ್ ಆನಂದ್ ಜೀವಿಗೆ ಬೆಳ್ಳಿ ಪದಕ

ಕೋಲಾರ,ಡಿ.೨೩- ಸಮಾಜದ ಒಳಿತಿಗಾಗಿ ಎಲೆಮರೆಕಾಯಂತೆ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವುದು ಮುಖಂಡರ ಆದ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಎ. ಶ್ರೀನಿವಾಸ ಅಭಿಪ್ರಾಯಪಟ್ಟರು.
ನಗರದ ಎಸ್.ಎನ್.ಆರ್ ವೃತ್ತದಲ್ಲಿ ಅಹಿಂದ ಜನ ಸೇವಾ ಸಮಿತಿಯ (ರಿ )ಆಟೋ ಚಾಲಕರ ಸಂಘ ಹಾಗೂ ಎ. ಶ್ರೀನಿವಾಸ್ ಯುವ ಬ್ರಿಗೇಡ್ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ, ನರಸಿಂಹರಾಜು ಆಟೋ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಾಧಕರಿಗೆ ಬೆಳ್ಳಿ ಪದಕ ವಿತರಣೆ ಮಾತನಾಡಿದರು.
ಕೋಲಾರ ನಗರದ ಕಾರಂಜಿಕಟ್ಟೆ ನಿವಾಸಿ ಸ್ನೇಕ್ ಜೀವಿ ಆನಂದ್ ಚಿಕ್ಕ ವಯಸ್ಸಿನಿಂದಲೂ ಉರುಗಗಳನ್ನು ಉಳಿಸುವ ಹಾಗೂ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಯಾರಿಂದಲೂ ಯಾವುದೇ ರೀತಿಯ ಸಹಾಯವನ್ನು ಪಡೆಯದೆ ತನ್ನ ವಾಹನದಲ್ಲೇ ಹೋಗಿ ಉರುಗಗಳನ್ನು ಹಿಡಿದು ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತಿದ್ದಾರೆ.
ಇವರು ಮಾಡುವ ಸಮಾಜ ಸೇವೆಯನ್ನು ಗುರುತಿಸಿ ಎಲೆಮರೆಕಾಯಂತೆ ಬೆಳೆಯುತ್ತಿರುವ ಆನಂದ್ ಜೀವಿ ರವರನ್ನು ಗುರ್ತಿಸಿ ಗೌರವಿಸಿ ಸನ್ಮಾನ ಮಾಡಿ ಬೆಳ್ಳಿ ಪದಕ ವಿತರಣೆ ಮಾಡಿರುವುದು ಸಂತಸ ತಂದಿದೆ ಹಾಗೂ ಇವರ ಸೇವೆ ಹೀಗೆ ಮುಂದುವರೆಯಲಿ ಎಂದರು. ಸಮಾರಂಭದಲ್ಲಿ ಹಲವಾರು ಗಣ್ಯರಿಗೆ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.