ಸ್ನಾತಕೋತ್ತರ ಪದವಿ, ಜಯಂತಿಗೆ ಚಿನ್ನದ ಪದಕ

ಅಕ್ಟೋಬರ್,ಅ,೧೭- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನಲ್ಲಿ ಸ್ನಾತಕೋತ್ತರ ಪಶು ವೈದ್ಯಕೀಯ (ಎಂ.ವಿ.ಎಸ್ಸಿ.) ವಿಜ್ಞಾನ ಪದವಿಯಲ್ಲಿ ಪ್ರಾಣಿ ಅನುವಂಶೀಯತೆ ಮತ್ತು ತಳಿ ಶಾಸ್ತ್ರ ವಿಭಾಗದಲ್ಲಿ ಕೋಲಾರ ತಾಲ್ಲೂಕು ಕೋಡಿರಾಮಸಂದ್ರ ಗ್ರಾಮದ ಎನ್.ವೆಂಕಟಾಚಲಪತಿ ಮತ್ತು ಕೆ.ಸರಸ್ವತಮ್ಮ ರವರ ಪುತ್ರಿಯಾದ ಕೆ.ವಿ.ಜಯಂತಿ ರವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ೧೩ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ರವರು ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.