ಸ್ನಾತಕೋತ್ತರ ಕೇಂದ್ರ : ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ವಿದ್ಯಾರ್ಥಿಗಳು ಮಾನವೀಯ ಮಾರ್ಗಗಳನ್ನು ಅನುಸರಿಸಿ – ಪ್ರೊ.ಪಿ.ಭಾಸ್ಕರ್
ರಾಯಚೂರು,ನ.೧೬-ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗುವುದು ಸತತ ಪರಿಶ್ರಮದಿಂದಲೆ ಜೀವನದಲ್ಲಿ ಕಲಿತಂತಹ ಯಾವುದೇ ವಿಷಯವಾಗಲಿ ಅವುಗಳ ಮೌಲ್ಯ ತಿಳಿಯುವುದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ. ಪ್ರಸ್ತುತ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ ಅದನ್ನು ತಡೆದು ಉನ್ನತ ಜೀವನಕ್ಕೆ ಸಮಯ ಪ್ರಜ್ಞೆ, ಶಿಸ್ತು, ಸಂಯಮ, ಪ್ರಾಮಾಣಿಕತೆ, ಮೌಲಿಕ, ನೈತಿಕ, ಮಾನವೀಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಐಟಿ ವಿಭಾಗ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಭಾಸ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನತುಂಗಾ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಅಗಮಿಸಿದ ಸ್ನಾತಕೋತ್ತರ ಕೇಂದ್ರದ ಸಮಾಜ ವಿಭಾಗದ ಮುಖ್ಯಸ್ಥರಾದ ಪ್ರೊ.ನುಸ್ರತ್ ಫಾತೀಮಾ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಕೋರಿ ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಿ ಮುಂದಿನ ನಿಮ್ಮ ಜೀವನ ಸುಗಮವಾಗಿ ಸಾಗಲು, ಪೋಷಕರ ಕನಸು ಸಾಕಾರಗೊಳಿಸಲು ಸಮಾಜದ ಏಳ್ಗೆಗೆ ಕಾರಣರಾಗಲು ಪ್ರಯತ್ನಿಸಿ ಎಂದರು.
ಸ್ನಾತಕೋತ್ತರ ಕೇಂದ್ರದ ಗ್ರ್ರಂಥಪಾಲಕರಾದ ಡಾ.ಜಿ.ಎಸ್.ಬಿರಾದರ್, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ವಿಜಯಲಕ್ಷ್ಮೀ ಬಾಬು ಕಮಲ್, ಭೀಮರೆಡ್ಡಿ, ನಿಂಗಪ್ಪ, ಅಮರೇಶ್. ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶೃತಿ ಪ್ರಾರ್ಥಿಸಿದರೆ, ಸಾಗರ್ ಸ್ವಾಗತಿಸಿದರು. ರಾಧಾ ನಿರೂಪಿಸಿದರು, ಕರುಣಾ ವಂದಿಸಿದರು.