ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ


ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಇಂಗ್ಲಿಷ ವಿಭಾಗದಿಂದ ಸ್ನೇಹಸಮ್ಮಿಲನ ಕಾರ್ಯಕ್ರಮ ಜರುಗಿತು. ಈ ವೇಳೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತಿಸುವ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆರ್ ಅಂಜನಪ್ಪ  ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಂಗ್ಲಭಾμÉಯನ್ನು ಆಯ್ಕೆ ಮಾಡಿಕೊಂಡು ಓದಿದ ವಿದ್ಯಾರ್ಥಿಗಳಿಗೆ ಜಗತ್ತಿನಾದ್ಯಂತ ಸಾಕಷ್ಟು ಉದ್ಯೋಗ ಅವಕಾಶಗಳು ಸಿಗುತ್ತದೆ. ಯಾರು ಕಠಿಣ ಶ್ರಮವಹಿಸುತ್ತಿರೋ ಅವರ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ತ್ರಿವೇಣಿ, ಡಾ.ವಸ್ತ್ರದ, ಡಾ.ಶಶಿಕಲಾ, ಡಾ.ಕರಿಬಸಪ್ಪ ನಂದಿಹಳ್ಳಿ, ಪೆÇ್ರ. ಭೀಮಣ್ಣ ಸುಣಗಾರ, ಗಿರೀಸ್ವಾಮಿ, ನಟರಾಜ್, ಡಾ.ಲತಾ, ಪತ್ರಾಂಕಿತ ವ್ಯವಸ್ಥಾಪಕಿ ಗೀತಾದೇವಿ, ಡಾ;ಶಾಂತಕುಮಾರಿ, ಡಾ. ಶಿರಾ ಲತಾ, ಡಾ.ರಿಹಾನಾಬಾನು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮುನಜಾ ಸ್ವಾಗತಿಸಿದರು, ಅನ್ನಪೂರ್ಣ ನಿರೂಪಿಸಿದರು, ಕುಮಾರ್, ಅಜಯ್ ವಂದನಾರ್ಪಣೆ ನೆರವೇರಿಸಿದರು.