ಸ್ಥಾಯಿ ಸಮಿತಿ ಚುನಾವಣೆ ಬಿಜೆಪಿ ಆಪ್ ಸಂಘರ್ಷ

ನವದೆಹಲಿ,ಫೆ.೨೩-ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಗೌಪ್ಯ ಮತದಾನ ಉಲ್ಲಂಘಿಸಲಾಗಿದೆ ಎನ್ನುವ ಬಿಜೆಪಿ ಸದಸ್ಯರ ಆರೋಪ, ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಪಾಲಿಕೆ ಸದಸ್ಯರು ಮೊಬೈಲ್ ಮೂಲಕ ಮತಯಂತ್ರಗಳ ಛಾಯಾಚಿತ್ರ ತೆಗೆಯುತ್ತಿದ್ದು, ಇದು ಸೆಕೆಂಡ್ ಬ್ಯಾಲೆಟ್ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ದೆಹಲಿ ನೂತನ ಮೇಯರ್ ಶೆಲ್ಲಿ ಒಬಿರಾಯ್ ಬಿಜೆಪಿಗೆ ಸದನದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಎಎಪಿ ಪಾಲಿಕೆ ಸದಸ್ಯರು ಸದನದಲ್ಲಿ ವಾಗ್ವಾದ ನಡೆಸಿದು. ಇದರಿಂದ ಬಿಗುವಿನ ವಾತಾರಣ ನಿರ್ಮಾಣವಾಗಿತ್ತು.
ಭಾರೀ ಗೊಂದಲ ಮತ್ತು ಘೋಷಣೆಗಳ ನಡುವೆ ಎಎಪಿ ಮತ್ತು ಬಿಜೆಪಿ ಪಾಲಿಕೆ ಪರಸ್ಪರ ಘರ್ಷಣೆ ಉಂಟಾಗಿದ್ದರಿಂದ ಪಾಲಿಕೆ ರಣರಂಗವಾಯಿತು.
ಕೆಲವು ಪಾಲಿಕೆ ಸದಸ್ಯರು ಜಗಳವಾಡುತ್ತಿರುವುದು ಕಂಡಬಂದಿದೆ. ಇನ್ನೂ ಕೆಲವರು ಸದನದಲ್ಲಿ ಮಲಗಿರುವ ದೃಶ್ಯ ಕಾಣಬಹುದಾಗಿದೆ. ಸಿಸಿಟಿವಿಯಲ್ಲಿ ದಾಖಲಾಗಿದೆ.
ಕೆಲವು ಪಾಲಿಕೆ ಸದಸ್ಯರು ಮತಪೆಟ್ಟಿಗೆಗಳನ್ನು ಬಾವಿಗೆ ಎಸೆಯಲು ಪ್ರಾರಂಭಿಸಿದರು. ಇನ್ನೂ ಕೆಲವರು ಇತರರನ್ನು ತಳ್ಳಾಟ, ನೂಕಾಟ ಪರಿಸ್ಥಿತಿ ಉಂಟಾಗಿ ಬಿಗಾಡಾಯಿಸುವ ಹಂತ ತಲುಪಿತು
ಬಿಜೆಪಿ ಸದಸ್ಯರಿಂದ ಹಲ್ಲೆ: ಆರೋಪ
ಸ್ಥಾಯಿ ಸಮಿತಿ ಚುನಾವಣೆ ವೇಳೆ ಬಿಜೆಪಿ ಪಾಲಿಕೆ ಸದಸ್ಯತು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಬಿಜೆಪಿ ಗೂಂಡಾಗಿರಿ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಎಎಪಿ ಶಾಸಕ ಕುಲದೀಪ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಎಎಪಿಗೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಇದನ್ನು “ಅರಾಜಕತಾವಾದಿ ಅಕ್ರಿಮೋನಿಯಸ್ ಪಾರ್ಟಿ” ಎಂದು ಜರಿದಿದ್ದಾರೆ.