ಸ್ಥಾಯಿಸಮಿತಿ ಚುನಾವಣೆಗೆ ಆಗ್ರಹ

ಕಲಬುರಗಿ,ಆ 8: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ರಚನೆಗೆ ಚುನಾವಣೆ ನಡೆಸುವಂತೆ ಕರವೇ ಕಾವಲುಪಡೆ ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾಧ್ಯಕÀ ಮಂಜುನಾಥ ನಾಲವಾರಕರ್ ಜಿಲ್ಲಾ ಆಡಳಿತಕ್ಕೆ ಆಗ್ರಹಿಸಿದ್ದಾರೆ
ಕಲಬುರಗಿ ಮಹಾ ನಗರ ಪಾಲಿಕೆ ಮಹಾಪೌರ, ಉಪಾಮಹಾಪೌರ, ವಿರೋಧ ಪಕ್ಷದ ನಾಯಕರು ಈಗಾಗಲೇ ಆಯ್ಕೆಯಾಗಿದ್ದಾರೆ.
ಮಹಾ ನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಮಾಡುವ ಮೂಲಕ ಕಲಬುರಗಿ ಬಡಾವಣೆಯ ಮೂಲ ಸೌಲಭ್ಯ ಒದಗಿಸುವುದು, ನಗರ ಅಭಿವೃದ್ಧಿ ಮತ್ತು ಪಾಲಿಕೆ ಸದಸ್ಯರ ಸಲಹೆಗಳು ಪಡೆದು ಸಾಮಾನ್ಯ ಸಭೆ ನಡೆಸುವ ಅವಶ್ಯಕತೆ ತುಂಬಾ ಇದೆ ಎಂದಿದ್ದಾರೆ.