ಸ್ಥಳೀಯ ಸಮಸ್ಯೆಗಳ ಸಂಶೋಧನೆಗೆ ಮನ್ನಣೆ ನೀಡಿ: ಪ್ರೊ. ಸಿದ್ದಪ್ಪ

ದಾವಣಗೆರೆ ಜ.೧೪; ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕ್ರಮಗಳ ಬಗ್ಗೆ ನಡೆಸುವ ಸಂಶೋಧನೆಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಆ ನಿಟ್ಟಿನಲ್ಲಿ ಸಂಶೋಧಕರು, ವಿಜ್ಞಾನಿಗಳು ಆದ್ಯತೆ ನೀಡಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ ಸಲಹೆ ನೀಡಿದರು.     ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ  ಏರ್ಪಡಿಸಿದ್ದ ಅಧ್ಯಯನ ತಯಾರಿ ಕುರಿತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯ ಆಧಾರಿತ ಬಹುಶಾಸ್ತಿçÃಯ ಅಧ್ಯಯನಕ್ಕೆ ಹೆಚ್ಚು ಮನ್ನಣೆ ಸಿಗುತ್ತದೆ. ಇದು ಇತ್ತೀಚಿನ ಬೆಳವಣಿಗೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು, ಸಂಶೋಧಕರ ಮನಸ್ಥಿತಿಯೂ ಬದಲಾಗಬೇಕು ಎಂದು ನುಡಿದರು.ಸಂಶೋಧನೆಗಳು ಯಾವುದೋ ಅಂಕಿ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ಒದಗಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸಮುದಾಯದಲ್ಲಿ ಕೆಲಸ ಮಾಡಿದ ಅನುಭವವನ್ನು ಒಳಗೊಂಡು ಪರಿಪೂರ್ಣ ವಿಚಾರಗಳ ದಾಖಲೀಕರಿಸುವುದು ಮುಖ್ಯ. ಇದಕ್ಕೆ ಸರ್ಕಾರದ ಹಲವು ಸಂಸ್ಥೆಗಳು ಹಣಕಾಸಿನ ನೆರವು ನೀಡುತ್ತವೆ. ಅದನ್ನು ಬಳಸಿಕೊಂಡು ಸಂಶೋಧನೆ ಕೈಗೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿರ್ಮಾಣದ ಜೊತೆಗೆ ವೈಯಕ್ತಿಕವಾಗಿ ಬೆಳೆಯಲು ಪ್ರಾಧ್ಯಾಪಕರು ಅಧ್ಯಾಪನ, ಅಧ್ಯಯನವಲ್ಲದೆ ಸಂಶೋಧನೆಗೂ ಮನ್ನಣೆ ನೀಡಬೇಕು. ಪ್ರತಿಯೊಬ್ಬ ಶಿಕ್ಷಕರೂ ಸಮಾಜದೊಂದಿಗೆ ಬೆರೆತು, ಕೆಲಸ ಮಾಡಬೇಕು. ಅಲ್ಲಿರುವ ಅನುಭವವನ್ನು ಆಧರಿಸಿ ಸಂಶೋಧನೆ ನಡೆಸಲು ಗಮನ ನೀಡಬೇಕು ಎಂದು ನುಡಿದರು.   ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ. ಬಸವರಾಜ ಬಣಕಾರ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್ ಉಪಸ್ಥಿತರಿದ್ದರು.