ಸ್ಥಳೀಯ ರೈಲಲ್ಲಿ ಜಪಾನ್ ರಾಯಭಾರಿ ಪಯಣ

ಮುಂಬೈ,ಜೂ.೨- ಭಾರತ ಪ್ರವಾಸದಲ್ಲಿರುವ ಜಪಾನ್ ರಾಯಭಾರಿ ಹಿರೋಷಿ ಸುಜುಕಿ ಮುಂಬೈನಲ್ಲಿ ಲೋಕಲ್ ರೈಲಿನ ಪ್ರಯಾಣದ ಖುಷಿ ಅನುಭವಿಸಿದ್ದಾರೆ. ರೈಲಿನ ಬಾಗಿಲ ಬಳಿ ನಿಂತು ಫೋಟೋಗೆ ಪೋಸ್ ಕೊಟ್ಟ ಹಿರೋಶಿ ಫೋಟೋ ಈಗ ವೈರಲ್ ಆಗಿದೆ.
ಬುಲೆಟ್ ಟ್ರೈನ್ ಯೋಜನೆಗೆ ಶ್ರಮಿಸಿದ ಕಾರ್ಮಿಕರ ಶ್ರಮವನ್ನು ಶ್ಲಾಘಿಸಿದ ಸುಜುಕಿ ಮುಂಬೈ ಲೋಕಲ್ ರೈಲಿನ ಮೂಲಕ ಪ್ರಯಾಣ ಬೆಳೆಸಿದರು. ರೈಲಿನಲ್ಲಿ ಸುಜುಕಿ ಸಾಮಾನ್ಯ ಪ್ರಯಾಣಿಕನಾಗಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
ನಾನು ಮುಂಬೈನಲ್ಲಿದ್ದೇನೆ ಎಂದು ಸುಜುಕಿ ಟ್ವೀಟ್ ಮಾಡಿದ್ದು ಮತ್ತೊಂದು ಟ್ವೀಟ್‌ನಲ್ಲಿ ಮುಂಬೈನ ಸ್ಥಳೀಯ ಮಾರುಕಟ್ಟೆಯಲ್ಲಿ ನೂರು ರೂ.ಬೆಲೆಯ ಬಿಳಿ ಶರ್ಟ್‌ಗಳನ್ನು ನೋಡುತ್ತಿದ್ದು.
ಮುಂಬೈ ಗ್ರಾಹಕರ ಶರ್ಟ್ ಖರೀದಿಗೆ ಚೌಕಾಸಿ ಮಾಡುವುದನ್ನು ಗಮನಿಸಿದ ಅವರು ಏನು ಚೌಕಾಶಿ! ನಾನು ಖರೀದಿಸಬೇಕೇ?” ಛಾಯಾಚಿತ್ರಕ್ಕೆ ಶೀರ್ಷಿಕೆಯಾಗಿ ಬರೆದುಕೊಂಡಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ, ಸುಜುಕಿ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರನ್ನು ಭೇಟಿ ಮಾಡಿದರು ಮತ್ತು ಕ್ವಾಡ್ ಮತ್ತು ಜಿ ೨೦ ಸೇರಿದಂತೆ ಭಾರತದೊಂದಿಗೆ ಎರಡೂ ರಾಷ್ಟ್ರಗಳ ಭವಿಷ್ಯದ ಸಹಕಾರದ ಕುರಿತು ಚರ್ಚಿಸಿದರು.
ದೆಹಲಿಯಲ್ಲಿ ಗಾರ್ಸೆಟ್ಟಿ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಸುಜುಕಿ ಹೇಳಿದ್ದಾರೆ.