ಸ್ಥಳೀಯ ಚರಿತ್ರೆ ಮತ್ತು ಸಾಂಸ್ಕೃತಿಕ ಬರಹಗಾರ ಕುಂಬಾಸ


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.14 ಬಳ್ಳಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾಗಿದ್ದ ಈಚೆಗೆ ನಿಧನರಾದ ಹರಪನಹಳ್ಳಿಯ ಸಾಹಿತಿ ಶ್ರೀ ಕುಂ.ಬಾ. ಸದಾಶಿವಪ್ಪರಿಗೆ ಗಂ.ಭೀ.ಸ.ಪ.ಪೂ‌.ಕಾಲೇಜಿನಲ್ಲಿ ತಾಲೂಕು ಕಸಾಪ ಘಟಕದ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು.
ತಾಲೂಕು ಕಸಾಪ ಅಧ್ಯಕ್ಷರಾದ ಗೂಳಪ್ಪ ಹುಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ಹಿರಿಯ ಸಾಹಿತಿಗಳಾದ ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಎ.ಎಸ್ ಕರಿಬಸಪ್ಪ, ಪ್ರಾಚಾರ್ಯರಾದ ಡಾ.ಎಂ.ಕೆ.ದುರುಗಪ್ಪ , ಉಪ ಪ್ರಾಚಾರ್ಯರಾದ ವಿ.ಮಲ್ಲಪ್ಪ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎ.ಅರ್ ಪಂಪಣ್ಣ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಜೆ.ಎಂ.ವೀರಸಂಗಯ್ಯ, ಮತ್ತು ಶಾಲಾ ಶಿಕ್ಷಕರಾದ ಎಂ.ಪಿ.ಎಂ.ಮಂಜುನಾಥ,  ವೆಂಕಟೇಶ ನಾಯ್ಕ, ಎಂ.ರಾಜು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಗೌರವ ಕಾರ್ಯದರ್ಶಿ ಬಿ.ಮಾರುತಿ ಕಾರ್ಯಕ್ರಮ ನಿರ್ವಹಿಸಿದರು.