ಸ್ಥಳೀಯರಿಗೆ ಸಚಿವ ನೀಡಲು ಒತ್ತಾಯ

ಲಿಂಗಸೂಗುರು,ಮೇ.೨೩- ಪಟ್ಟಣದ ಪತ್ರಿಕಾ ಭವನದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಲಿಂಗಸುಗೂರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಭೂಪನ ಗೌಡ ಕರಡ್ ಕಲ್ ಮಾತನಾಡಿದ ಅವರು ಲಿಂಗಸುಗೂರ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಯಾದ ಡಿ.ಎಸ್.ಹುಲಗೇರಿ ೨೮೭೫ ಮತಗಳ ಅಂತರದಿಂದ ಸೋತಿರ ಬಹುದು ಆದರೆ ರಾಜ್ಯದಲ್ಲಿ ನಮ್ಮದೇ ಪಕ್ಷದ ಅಧಿಕಾರವಿದೆ. ಲಿಂಗಸುಗೂರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡುವದು ಬೇಡ ಯಾಕೆಂದರೆ ಕ್ಷೇತ್ರದ ಅಭಿವೃದ್ಧಿಗೆ ಡಿ.ಎಸ್.ಹುಲಗೇರಿ ಮಾಜಿ ಶಾಸಕರು ಸರಕಾರದಿಂದ ಯಾವುದೇ ಅಭಿವೃದ್ಧಿಗೆ ಅನುಧಾನವನ್ನು ತರಬಲ್ಲರು. ರಾಯಚೂರು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನಮ್ಮ ಜಿಲ್ಲೆಯವರಿಗೆ ನೀಡಬೇಕೆಂದು ಮುಖ್ಯ ಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿ. ಡಿ.ಕೆ ಶಿವಕುಮಾರಗೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾದ ಪಾಮಯ್ಯ ಮುರಾರಿ. ಗುಂಡಪ್ಪ ನಾಯಕ್. ಮಹ್ಮದ ರಫಿ. ಕುಪ್ಪಣ್ಣ ಕವಿತಾಳ ಉಪಸ್ಥಿತರಿದ್ದರು.