ಸ್ಥಳೀಯರಿಗೆ ಅವಕಾಶ ನೀಡಲು ಕೊರಿಕೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜ.3: ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಲು ಕಾಂಗ್ರೆಸ್ ರಾಜ್ಯ ಸಮಿತಿಗೆ ಮನವಿ ಮಾಡಿದರು.
ಪಟ್ಟಣದ ಕೆಇಬಿ ಸರ್ಕಲ್ ಬಳಿ ಇಂದು  2023 ವಿಧಾನ ಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಿ, ಸ್ಥಳೀಯರು ಶಾಸಕರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬ ಬ್ಯಾನರ್ ಮೂಲಕ ರಾಜ್ಯ ಕಾಂಗ್ರೆಸ್ ಸಮಿತಿಗೆ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್, ಪ್ರತಿ ಹಳ್ಳಿ ಹಳ್ಳಿಗೆ ಬೇಟಿ ನೀಡಿ ಕಾಂಗ್ರೆಸ್ ಸಂಘಟನೆ ಮಾಡಿದ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಿಧಾನ ಸಭಾ ಚುನಾವಣೆಗೆ ಟಿಕೆಟ್ ನೀಡಿ. ಒಂದು ವೇಳೆ ವಲಸಿಗರಿಗೆ ಟಿಕೆಟ್ ನೀಡಿದರೆ ನಮ್ಮದು ಧಿಕ್ಕಾರವಿದೆ, ವಲಸಿಗರಿಗೆ ಬೆಂಬಲ ನೀಡಲು ನಮ್ಮ ಒಮ್ಮೆತ ವಿಲ್ಲ ಎಂದು ತಿಳಿಸಿದರು.
ಪ ಪಂ ಸದಸ್ಯರಾದ ಅಬ್ದುಲ್ಲಾ ಮಾತನಾಡಿ, ಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ಗೆಲ್ಲಬೇಕು ಎಂದರೆ, ಸ್ಥಳೀಯ ಸೂಕ್ತವಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಸ್ಥಳೀಯರಿಂದ ಮಾತ್ರ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ರಾಜ್ಯ ಸಮಿತಿ ಇದನ್ನು ಮನಗಂಡು ಸ್ಥಳೀಯರಿಗೆ ಅವಕಾಶ ನೀಡಿ ಎಂದರು.
ಈ ಸಂದರ್ಭದಲ್ಲಿ ಗೋಪಾಲ್, ಶಿವಲಿಂಗ, ತುಮಕೂರ್ಲಹಳ್ಳಿ ತಿಪ್ಪೇಸ್ವಾಮಿ, ರಫೀಕ್, ದರ್ಶನ್, ಶಿವು ಚಿಕ್ಕೋಬನಹಳ್ಳಿ ಪಂಪಣ್ಣ,ಡಿ.ಬಿ.ವೆಂಕಟೇಶ್, ಗೋಪಾಲ ಇನ್ನು ಮುಂತಾದವರಿದರು.