ಸ್ಥಳಾಭಾವ ಸಿಎಂಗೆ ಆಹ್ವಾನವಿಲ್ಲ: ಜೋಶಿ

ಸಂಜೆವಾಣಿ ಪ್ರತಿನಿಧಿಯಿಂದ
ವಿಜಯಪುರ,ಜ. ೨-ರಾಮ ಮಂದಿರ ಉದ್ಘಾಟನೆಗೆ ಸ್ಥಳದ ಅಭಾವ ಇದೆ. ಅಲ್ಲಿನ ವ್ಯವಸ್ಥೆ ಸೀಮಿತವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ವಿಜಯಪುರ ನಗರದ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದವರು ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್‌ನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಆಂಜನೇಯಗೆ ಸದ್ಭುದ್ದಿ ಬರಲಿ. ಯಾವ ರಾಜ್ಯದ ಬಿಜೆಪಿ ಸಿಎಂಗೂ ಕರೆದಿಲ್ಲ. ನಾನು ಭಾರತ ಸರ್ಕಾರ ಮಂತ್ರಿ ನನ್ನನ್ನೂ ಕರೆದಿಲ್ಲ. ನನಗೆ ಕರೆಯೋದಲ್ಲ ಬರಬೇಡಿ ಎಂದು ಹೇಳಿದ್ದಾರೆ ಎಂದು ನುಡಿದರು.
ಯಾರನ್ನು ಕರೆಯಬೇಕು, ಕರೆಯಬಾರದು ಅನ್ನುವುದು ಶ್ರೀ ರಾಮ ಮಂದಿರ ಕಮೀಟಿಯ ಸ್ವತಂತ್ರ ನಿರ್ಧಾರವಾಗಿರುತ್ತದೆ ಎಂದರು.