ಸ್ಥಬ್ದವಾದ ಹೊಸಪೇಟೆ

ಹೊಸಪೇಟೆ ಮೇ 19: ಸದಾ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹಾಗೂ ಜನತಾ ಕಪ್ರ್ಯೂ ನಡುವೆಯೂ ಸಂಚಾರ ಮುಕ್ತವಾಗದ ರಸ್ತೆಗಳು ಒಮ್ಮಿಂದಮ್ಮೊಲೆ ಸ್ಥಬ್ದವಾಗಿದೆ.
ನಗರದ ಕಾಲೇಜು ರಸ್ತೆ, ಸ್ಟೇಷನ್ ರಸ್ತೆ ಡ್ಯಾಂ ರಸ್ತೆ, ಹಂಪಿ ರಸ್ತೆ ಸೇರಿದಂತೆ ಬಳ್ಳಾರಿ ರಸ್ತೆಯಲ್ಲಿ ಜನ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ, ಅಗತ್ಯವಸ್ತು ಸೇರಿದಂತೆ ಎಲ್ಲಾ ರೀತಿಯ ಸಂಚಾರ ನಿರ್ಭಂಧವಿದಿಸಿ ಜಿಲ್ಲಾಡಳಿತ ಆದೇಶಿಸಿದ ಬೆನ್ನಲೇ ಇಂದು ಎಂದೂ ಕಾಣದ ಜನಸಂಚಾರ ಉಂಟಾಗಿದ್ದು 10 ಗಂಟೆಗೆ ಎಲ್ಲವೂ ಮೌನಯಿತು.
ರಸ್ತೆಯಲ್ಲಿ ಪೊಲೀಸರು, ಕರೋನಾ ವಾರಿಯರ್ರ್ಸ್, ಮೇಡಿಕಲ್ಸ್‍ಗಳನ್ನು ಹೊರತು ಪಡಿಸಿ ಮತ್ತಾವುದೆ ಸಂಚಾರ ಕಂಡುಬರಲಿಲ್ಲ, ಇಂದಿನಿಂದ ಮುಂದಿನ 4 ದಿನ ನಗರದ ಎಲ್ಲಾ ರಸ್ತೆಗಳು ಇದೆರೀತಿ ಮುಂದುವರೆಯುವ ಮೂಲಕ ಸಂಚಾರ ಮುಕ್ತವಾಗಿ ಸೋಂಕು ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗುವುದೊ ಕಾದುನೋಡಬೇಕಾಗಿದೆ.