ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ

ಧಾರವಾಡ, ಆ31: ಗೃಹಲಕ್ಷ್ಮಿ ಯೋಜನೆಗೆ ನನ್ನ ಕ್ಷೇತ್ರದಲ್ಲಿ 45503 ಪಲಾನುಭವಿಗಳು ನೋಂದಾಯಿಸಿದ್ದು 9 ಕೋಟಿ 10 ಲಕ್ಷದ 6 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆದ್ದಿರುವ ಕಾಂಗ್ರೆಸ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಪೈಕಿ ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಹೆಬ್ಬಳ್ಳಿಯಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಧಾರವಾಡ ಗ್ರಾಮೀಣ 71ನೇ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು 45503 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ಲಾಭ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 145 ಗ್ರಾಮ ಪಂಚಾಯತಿಗಳು,ಹು-ಧಾ ಮಹಾನಗರಪಾಲಿಕೆಯ 82 ವಾರ್ಡಗಳು ಹಾಗೂ 5 ಪಟ್ಟಣ ಪಂಚಾಯ್ತಿಗಳನ್ಬು ಸೇರಿ ಒಟ್ಟು ಜಿಲ್ಲೆಯಾದ್ಯಂತ 404848 ಪಡಿತರ ಕಾರ್ಡುಗಳನ್ನು ಹೊಂದಿದ್ದು ಅದರಲ್ಲಿ ಈವರೆಗೆ 339305 ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಈ ಕಾರ್ಯಕ್ರಮದ ಲೋಕಾರ್ಪಣೆ ಸಮಯದಲ್ಲಿ, ನಮ್ಮ ಧಾರವಾಡ ಜಿಲ್ಲೆಯಲ್ಲಿ 82452 ,ಫಲಾನುಬವಿಗಳಿಗೆ ಒಟ್ಟು 16494000 ರೂಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.