
ಕಲಬುರಗಿ.ಮಾ.07:ಹೈದ್ರಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಹಾಗೂ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಸಂಯುಕ್ತಾಶ್ರಯದಲ್ಲಿ ಇದೇ ತಿಂಗಳ 10 ರಂದು ಆಯೋಜಿಸಲಾಗುವ “ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆಗೆ” ಮ್ಯಾರಾಥಾನ ಮೂಲಕ ಚಾಲನೆ ನೀಡಲಾಯಿತು.
ಮ್ಯಾರಾಥಾನದಲ್ಲಿ ಪಿ.ಡಿ.ಎ. ಹಾಗೂ ಸ್ಕೂಲ ಆಫ್ ಆರ್ಕಿಟೆಕ್ಚರ್‍ನ ಮಹಿಳಾ ಶಿಕ್ಷಕರು, ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮ್ಯಾರಾಥಾನಗೆ ಚಾಲನೆ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ಅವರು ಮಾತನಾಡುತ್ತ ಮಹಾವಿದ್ಯಾಲಯದಲ್ಲಿ ಪ್ರತಿ ವರುಷ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಆಚರಿಸುತ್ತಿದ್ದು ಈ ವರುಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ವಿಷಯ “ಡಿಜಿಟಲ್ ಇನ್ನೋವೇಷನ್ ಆಂಡ್ ಟೆಕ್ನಾಲಜಿ ಫಾರ್ ಜೆಂಡರ್ ಇಕ್ವಾಲಿಟಿ” ಕುರಿತು ವಿಚಾರ ಗೋಷ್ಠಿಗಳು ಕೂಡ ನಡೆಸಲಾಗುವುದು ಎಂದು ತಿಳಿಸಿದರು
ಸ್ತ್ರೀ ಶಕ್ತಿ, ಸ್ತ್ರೀ ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಈ ಮ್ಯಾರಾಥಾನ ಹಮ್ಮಿಕೊಳ್ಳಲಾಗಿದ್ದು “ಕಾರ್ಯ ಸಾಧನೆಗೆ ಧೈರ್ಯ ಮತ್ತು ಶಕ್ತಿ”ಯ ಮಹತ್ವವನ್ನು ಬಿಂಬಿಸುವುದೇ ಈ ಮ್ಯಾರಾಥಾನ ಉದ್ದೇಶವಾಗಿದೆ ಎಂದು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಚಾರ್ಯ(ಅಕಾಡೆಮಿಕ್) ಡಾ. ಭಾರತಿ ಹರಸೂರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ತಿಂಗಳ 10 ರಂದು ಅಂತರಾಷ್ಟ್ರೀಯ ಮಹಳಾ ದಿನಾಚಾರಣೆಯನ್ನು ಆಚರಿಸಲಿದ್ದು ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಹಾರಾಷ್ಟ್ರದ ಔರಂಗಬಾದ ಮೂಲದ ಮಹಿಳಾ ಉದ್ಯಮಿ ಹಾಗೂ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಶ್ರೀಮತಿ ವರ್ಷಾ ದೇಶಮುಖ ಅವರು ಭಾಗವಹಿಸಲಿದ್ದಾರೆ ಎಂದು ಮಹಾವಿದ್ಯಾಲದ ಉಪ-ಪ್ರಾಚಾರ್ಯ(ಅಡ್ಮಿನಿಷ್ಟ್ರೇಷನ್) ಡಾ. ಕಲ್ಪನಾ ವಾಂಜರಖೇಡಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಪ್ರಾಚಾರ್ಯರಾದ ಪ್ರೊ. ಪರನಜ್ಯೋತಿ ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಡಾ. ಇಂದುಮತಿ ದೇಶಮಾನ್ಯ ಹಾಗೂ ಸಂಚಾಲಕರಾಗಿ ಪ್ರೋ. ವೀಣಾ ಸರಾಫ್ ಅವರು ಕಾರ್ಯ ನಿರ್ವಹಿಸಿದರು.