ಸ್ತ್ರೀ, ಪುರುಷರಿಗೆ ಸಮಾನ ವೇತನ

ಲಕ್ಷ್ಮೇಶ್ವರ,ಏ13 : ಸ್ತ್ರೀ, ಪುರುಷ ಎಂಬ ಯಾವುದೇ ಭೇದ ಮಾಡದೆ ಎಲ್ಲರಿಗೂ ಸಮಾನವಾಗಿ ಕೂಲಿಯನ್ನು ಉದ್ಯೋಗ ಖಾತ್ರಿಯಲ್ಲಿ ಪಾವತಿಸಲಾಗುತ್ತದೆ. ಇನ್ನೂ ಮುಂದುವರೆದು ದುಡಿಮೆಯ ಹಣ ಕೂಲಿಕಾರರ ಖಾತೆಗೆ ನೇರವಾಗಿ ಜಮೆಯಾಗುತ್ತದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಬಡಿಗೇರ ತಿಳಿಸಿದರು
ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಮತ್ತು ಪು.ಬಡ್ನಿ ಗ್ರಾಮ ಪಂಚಾಯತಿಯಲ್ಲಿಯ ಉದ್ಯೋಗ ಖಾತ್ರಿ ಯೋಜನೆಯಡಿ ಜಲ ಸಂಜೀವಿನಿ ಕಾರ್ಯಕ್ರಮದಡಿ ಬದು ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಜಮೀನಿನ ಮೇಲಿನ ಮೇಲ್ಮಣ್ಣು ಸಸ್ಯದ ಬೆಳವಣಿಗೆಗೆ ಅತ್ಯಂತ ಉಪಯುಕ್ತವಾಗಿದೆ. ಅದು ಖನಿಜಾಂಶ ಮತ್ತು ಪೆÇೀಷಕಾಂಶಗಳನ್ನು ಒಳಗೊಂಡಿರುತ್ತದೆ. ಅದರ ಸಂರಕ್ಷಣೆಗೆ ಬದು ನಿರ್ಮಾಣ ಪೂರಕವಾದ ಕಾಮಗಾರಿಯಾಗಿದೆ. ಪ್ರಸಕ್ತ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಲ ಸಂಜೀವಿನಿ ಎಂಬ ಕಾರ್ಯಕ್ರಮ ರೂಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಉಪಯೋಗವಾಗಲಿದೆ. ಪ್ರತಿ ವ್ಯಕ್ತಿಗೆ ದಿನಕ್ಕೆ 316 ರೂ. ಕೂಲಿ ಪಾವತಿಸಲಾಗುತ್ತದೆ. ಸರಿಯಾದ ಸಮಯಕ್ಕೆ ವೇತನ ಪಾವತಿಗೆ ನಿಗಾವಹಿಸಲಾಗಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಪ್ರತಿದಿನ ತಾಲೂಕು ವ್ಯಾಪ್ತಿಯಲ್ಲಿ 8ಸಾವಿರಕ್ಕೂ ಅಧಿಕ ಜನರು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಮಗಾರಿ ಸ್ಥಳದಲ್ಲಿ ವಿಧಾನಸಭೆ ಚುನಾವಣೆ ನಿಮಿತ್ತ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ಎಂ.ಆರ್. ಮಾದರ, ಟಿಎಂಐಎಸ್ ಚಂದ್ರಶೇಖರ ಹಳ್ಳಿ, ಟಿಎಇ ಲಿಂಗರಾಜ ಅರಿಷಿಣದ, ಬಿಎಫ್‍ಟಿ ಶಿಲ್ಪಾ ಲಮಾಣಿ, ಕಾಯಕ ಬಂಧುಗಳು ಸೇರಿ ಇತರರಿದ್ದರು.