ಸ್ತ್ರೀ ಪಾತ್ರಗಳೇ ಶೇಕ್ಸ್‍ಪಿಯರ್ ನಾಟಕಗಳ ಕೇಂದ್ರಬಿಂದು: ಪೆÇ್ರ. ನಾಯಕ್

ಧಾರವಾಡ, ಮೇ 3: ಶೇಕ್ಸಪಿಯರ್ ತನ್ನ ಸಮಕಾಲೀನ ನಾಟಕಕಾರರ ಪ್ರಭಾವಕ್ಕೊಳಗಾಗಿ ಆರಂಭದಲ್ಲಿ ನಾಟಕಗಳನ್ನು ರಚಿಸಿದರೂ ಬಹುಬೇಗ ಅದರಿಂದ ಹೊರಬಂದು ಸಾಹಿತ್ಯ ವಲಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದನು. ಕಾಮಿಡಿಗಳಲ್ಲಿ ಸ್ತ್ರೀ ಪಾತ್ರಗಳು ಹಾಗೂ ರುದ್ರ ನಾಟಕಗಳಲ್ಲಿ ಪುರುಷ ಪಾತ್ರಗಳು ಪ್ರಧಾನವಾಗಿದ್ದರೂ ಸಹ ಶೇಕ್ಸಪಿಯರ್ ರುದ್ರ ನಾಟಕಗಳಲ್ಲಿ ಅನೇಕ ಪ್ರಭಾವಿ ಸ್ತ್ರೀ ಪಾತ್ರಗಳನ್ನು ಸೃಷ್ಠಿಸಿದನು ಎಂದು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪೆÇ್ರ.ವಿ.ಟಿ.ನಾಯಕ್ ಅಭಿಪ್ರಾಯಪಟ್ಟರು.
ಧಾರವಾಡ ಕಟ್ಟೆಯು ಖ್ಯಾತ ನಾಟಕಕಾರ ಶೇಕ್ಸ್‍ಪಿಯರ್ ಜನ್ಮದಿನಾಚರಣೆ ಅಂಗವಾಗಿ ವರ್ಚುವಲ್ ವೇದಿಕೆಯಲ್ಲಿ ಶೇಕ್ಸಪಿಯರ್ ಉಪನ್ಯಾಸ ಮಾಲಿಕೆಯಡಿಯಲ್ಲಿ “ಶೇಕ್ಸಪಿಯರನ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು” ಎಂಬ ವಿಷಯದ ಕುರಿತು ಪೆÇ್ರ.ವಿ.ಟಿ.ನಾಯಕ್ ಮಾತನಾಡಿದರು. ಲೇಡಿ ಮ್ಯಾಕ್ ಬೆತ್ ಹಾಗೂ ಇತರ ಸ್ತ್ರೀ ಪಾತ್ರಗಳನ್ನು ಉದಾಹರಿಸುತ್ತ ಶೇಕ್ಸಪಿಯರನ ಪುರುಷ ಪಾತ್ರಗಳಿಗೆ ಸಮನಾದ ಸ್ತ್ರೀ ಪಾತ್ರಗಳನ್ನು ತನ್ನ ನಾಟಕಗಳಲ್ಲಿ ಸೃಷ್ಠಿಸಿದ್ದಾನೆ. ಆ ಪಾತ್ರಗಳು ಮಹಿಳೆಯರ ಗಟ್ಟಿತನವನ್ನು ಸಾರುತ್ತವೆ ಎಂದು ಹೇಳಿದರು.
ಶೇಕ್ಸ್‍ಪಿಯರ್ ತನ್ನ ಕೌಶಲ್ಯವನ್ನು ಸ್ತ್ರೀ ಪಾತ್ರಗಳನ್ನು ಆisguise (ಮಹಿಳಾ ಪಾತ್ರಗಳು ಪುರುಷ ವೇಶದಾರಿಗಳಾಗಿ ನಟನೆ ಮಾಡುವುದು)ನಲ್ಲಿ ತೋರಿಸುವುದರ ಮೂಲಕ ಮಹಿಳಾ ಪ್ರಾಬಲ್ಯ ಮತ್ತು ಶಕ್ತಿಯನ್ನು ತೋರಿಸಿದ್ದಾನೆ. ಶೇಕ್ಸ್‍ಪಿಯರ್ ಸೃಷ್ಠಿಸಿದ ಸ್ತ್ರೀ ಪಾತ್ರಗಳು ಸಮಕಾಲೀನ ಮಹಿಳೆಯರ ಸ್ಥಿತಿಗತಿಗೆ ಹಾಗೂ ಸಾಮಾಜಿಕ ವಾಸ್ತವಕ್ಕೆ ಕನ್ನಡಿಯಾಗಿದ್ದು, ಅವು ಸಾರ್ವಕಾಲಿಕ ಮಹಿಳಾ ಸಾಮರ್ಥ್ಯವನ್ನು ತೋರಿಸುತ್ತವೆ ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಹಾಗೂ ಧಾರವಾಡ ಕಟ್ಟೆಯ ಅಧ್ಯಕ್ಷ ಪೆÇ್ರ.ಬಸವರಾಜ ಡೋಣೂರ ಮಾತನಾಡುತ್ತ ಶೇಕ್ಸ್‍ಪಿಯರ್ ಅನೇಕ ಸಶಕ್ತ ಸ್ತ್ರೀ ಪಾತ್ರಗಳನ್ನು ತನ್ನ ನಾಟಕಗಳಲ್ಲಿ ಸೃಷ್ಠಿಸಿದ್ದಾನೆ. ಭಾರತೀಯರಷ್ಟೇ ಅಲ್ಲದೆ ಯುರೋಪಿನಲ್ಲಿ ಇಂದಿಗೂ ಶೇಕ್ಸಪಿಯರನ ನಾಟಕಗಳನ್ನು ನೋಡಿ ವೀಕ್ಷಕರು ಭಾವಪರವಶರಾಗುತ್ತಾರೆ. ಪೆÇರ್ಷಿಯಾ, ಕಲ್ಪರ್ನಿಯಾ, ಡೆಸ್ಡೆಮೋನಾ, ಕ್ಲಿಯೋಪಾತ್ರ, ಓಫಿಲಿಯಾ, ಜುಲಿಯಟ್ ಪಾತ್ರಗಳನ್ನು ಮರೆಯಲು ಸಾಧ್ಯವೇ ಇಲ್ಲ. ಶೇಕ್ಸಪಿಯರ ಅದ್ಭುತವಾದ ಸ್ತ್ರೀ ಲೋಕವನ್ನು ತನ್ನ ನಾಟಕಗಳಲ್ಲಿ ಸೃಷ್ಠಿಸಿದ್ದಾನೆ ಎಂದು ಹೇಳಿದರು.
ಧಾರವಾಡ ಕಟ್ಟೆಯ ಕಾರ್ಯದರ್ಶಿ ಡಾ.ಪ್ರಕಾಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರೆಡ್ಡಿ ವಂದಿಸಿದರು. ಸಮಂತ ದೇವು ಪತ್ತಾರ ತಾಂತ್ರಿಕ ನೆರವು, ಭಾಗ್ಯಶ್ರೀ ವಿರಕ್ತಮಠ ಕಾರ್ಯಕ್ರಮ ಸಂಘಟನೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ಡಿ.ಎಂ.ಹಿರೇಮಠ, ಅರವಿಂದ ಕುಲಕರ್ಣಿ, ಡಾ.ಜಿ.ಕೆ.ಬಡಿಗೇರ, ಡಾ.ಇಂದಿರಾ ಪಾಟೀಲಸೇರಿದಂತೆ ಅನೇಕ ಗಣ್ಯರು ಹಾಗೂ ನೂರಕ್ಕೂ ಹೆಚ್ಚು ಶೇಕ್ಸಪಿಯರ್ ನಾಟಕಗಳ ಓದುಗರು ಅಭಿಮಾನಿಗಳು ಪಾಲ್ಗೊಂಡಿದ್ದರು.