ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿ ಅಕ್ಕಮಹಾದೇವಿ

ಕಲಬುರಗಿ: ಎ.27:ಕನ್ನಡದ ಪ್ರಥಮ ಕವಯಿತ್ರಿಯಾಗಿ, ಶರಣ ಚಳುವಳಿಯ ಪ್ರಮುಖ ಮಹಿಳೆಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕಮಹಾದೇವಿಯವರು ಬಹುಮುಖಿ ವ್ಯಕ್ತಿತ್ವದ ಮಹಿಳಾ ಮೇರು ಶಿಖರವಾಗಿದ್ದಾರೆಂದು ಶರಣ ಚಿಂತಕಿ ಜಯಶ್ರೀ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ಕೈಲಾಸ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಸರಳವಾಗಿ ಜರುಗಿದ ‘ಅಕ್ಕಮಹಾದೇವಿ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಕ್ಕ ಮಹಾದೇವಿಯವರು ಅನುಭವಿಸಿದ ಕಷ್ಟ, ತೊಂದರೆ, ಪರೀಕ್ಷೆಗಳು ಬಹಳಷ್ಟು. ಅವೆಲ್ಲವುಗಳನ್ನು ಮೆಟ್ಟಿ ನಿಂತು, ಅಪ್ರತಿಮ ಸಾಧನೆ ಮಾಡುವ ಮೂಲಕ ಮಹಿಳಾ ಕುಲಕ್ಕೆ ಶಿರೋಮಣಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಇಡಿ ಜೀವನದುದ್ದಕ್ಕೂ ಪ್ರಯತ್ನಿಸಿದ್ದಾರೆ. ತಮ್ಮದೇ ಆದ ಅನುಭಾವದ ವಚನಗಳನ್ನು ರಚಿಸಿ, ಕನ್ನಡದ ಮೊದಲ ಕವಯತ್ರಿಯಾಗಿದ್ದಾರೆ. ಅಕ್ಕಮಹಾದೇವಿ ಜಗತ್ತು ಕಂಡ ಶ್ರೇಷ್ಠ ಮಹಿಳೆಯಾಗಿದ್ದು, ಎಲ್ಲಾ ಮಹಿಳೆಯರಿಗೆ ಸದಾ ಆದರ್ಶಪ್ರಾಯವಾಗಿದ್ದಾರೆಂದು ನುಡಿದರು.
ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಇಂದಿನ ಮಹಿಳೆಯರು ಯಾವುದೇ ಕಾರಣಕ್ಕೂ ಎದೆಗುಂದದೆ ಗಟ್ಟಿತನ ಬೆಳೆಸಿಕೊಳ್ಳಬೇಕು. ಮೌಢ್ಯತೆಯಿಂದ ಹೊರಬಂದು ಅಕ್ಕನ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಬೇಕು. ಸಂಸ್ಕøತಿಯನ್ನು ಬೆಳೆಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಬಾಲ್ಯದಿಂದಲೇ ಮಕ್ಕಳಿಗೆ ಶರಣ ಸಂಸ್ಕøತಿಯನ್ನು ಕಲಿಸಿಕೊಡುವ ಕಾರ್ಯವಾಗಬೇಕಾಗುಇದೆಯೆಂದು ಮಾರ್ಮಿಕವಾಗಿ ನುಡಿದರು.
ಮಕ್ಕಳಾದ ಬಸವಶ್ರೀ ಎಚ್.ಪಾಟೀಲ ಮತ್ತು ಬೃಂದಾ ಜಿ.ಪಾಟೀಲ ಅಕ್ಕಮಹಾದೇವಿ ವೇಷ ಧರಿಸಿ ಸಂಭ್ರಮಿಸಿದರು. ವಚನ ಪಠಣ ಜರುಗಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಅಣ್ಣಾರಾಯ ಎಚ್.ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ಗುರುರಾಜ ಪಾಟೀಲ, ವಿಜಯಲಕ್ಷ್ಮೀ ಜಿ.ಪಾಟೀಲ, ವೀರಣ್ಣ ಲೋಡ್ಡೆನ್, ವಿಜಯಲಕ್ಷ್ಮೀ ವಿ.ಲೋಡ್ಡೆನ್, ಸ್ವಾತಿ ವಿ.ಲೋಡ್ಡೆನ್, ಬಸವರಾಜ, ಆಕಾಶ ಇದ್ದರು.