ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜೂ.19: ಪಟ್ಟಣದ ಆರಾಧ್ಯ ದೈವ ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಆಷಾಡ ಅಮವಾಸ್ಯೆ ನಿಮಿತ್ತ ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅರ್ಧ ಪರ್ಲಂಗ್ ವರೆಗೆ ಸರತಿಯಲ್ಲಿ ನಿಂತು ಕಿಕ್ಕಿರಿದ ಜನಸಂದಣಿಯಲ್ಲಿ ಶ್ರೀಸ್ವಾಮಿಯ ದರ್ಶನ ಪಡೆದ ಭಕ್ತರು. ಶ್ರೀಸ್ವಾಮಿಯ ದೇವಸ್ಥಾನದಲ್ಲಿ ಬ್ರಾಹ್ಮೀ ಮೂರ್ತದಿಂದಲೇ ಆಮವಾಸೆಯ ಪೂಜಾ ಕೈಂಕಾರ್ಯಗಳು ಜರುಗಿದ್ದರಿಂದ, ಬೆಳಗ್ಗೆಯಿಂದ ಮಧ್ಯಾಹ್ನ 3 ರವರೆಗೆ ಸಾಮಿಯ ದರ್ಶನಕ್ಕೆ ಭಕ್ತರು ಎಡಬಿಡದೆ ಆಗಮಿಸಿ ಸ್ವಾಮಿ ಆಶಿರ್ವಾದ ಪಡೆದು ಭಕ್ತಿ ಸಮರ್ಪಿಸಿದರು,ಮಠದಲ್ಲಿನ ಪ್ರಸಾದ್ ಸ್ವೀಕರಿಸಿ ಸಂಪನ್ನರಾದರು.
ಘನ ಸರ್ಕಾರದ ಸ್ತ್ರೀ ಶಕ್ತಿ ಯೋಜನೆ ಹಿನ್ನೆಲೆ ಪ್ರತಿ ಅಮವಾಸ್ಯೆಗಿಂತ ಈ ಬಾರಿ ಶ್ರೀಸ್ವಾಮಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ಮಹಿಳಾ ಭಕ್ತರು ಆಗಮಿಸಿದ್ದರುವುದು ಗೋಚರಿಸಿತು.
ಮೊದಲು ಸ್ತ್ರೀಯರನ್ನು ಅಮವಾಸ್ಯೆ ಮತ್ತು ಇತ್ಯಾದಿ ಸಂಬಂದಿಕರ ಕಾರ್ಯಕ್ರಮಗಳಿಗೆ ನಮ್ಮನ್ನು ಕಳಿಸಲು ಮನೆಯಲ್ಲಿ ಪುರುಷರು ಹಿಂದೇಟು ಹಾಕುತ್ತಿದ್ದರು ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಸ್ತ್ರೀಯರಿಗೆ ಫ್ರೀ ಬಸ್ ಘೋಷಿಸಿದ ಹಿನ್ನೆಲೆ ಸಂಬಂಧಿಕರು ಊರುಗಳಲ್ಲಿ ಯಾವುದೇ ಶುಭ ಸಮಾರಂಭ ಇತ್ಯಾದಿ ಕಾರ್ಯಕ್ರಮಗಳಿಗೆ ನನ್ನೆ ಕಳಿಸುತ್ತಿದ್ದಾರೆ, ಇಂದು ಕೂಡಾ ಅಮವಾಸ್ಯೆಗೆ ನನ್ನ ಮನೆಯವರೇ ಕಳಿಸಿದ್ದಾರೆ.
ಫ್ರೀ ಬಸ್ ಘೋಷಣೆ ದಿನದಿಂದ ಪ್ರಸ್ತುತ ಇಂದಿನವರೆಗೂ ಸುಮಾರು 20 ಕ್ಕೂ ಹೆಚ್ಚು ಶುಭ ಸಮಾರಂಭಗಳಗೆ ಹಾಜರಾಗಿರುವೆ,ಸ್ತ್ರೀ ಶಕ್ತಿ ಯೋಜನೆ ಮಹಿಳೆಯರಿಗೆ ಉಪಯುಕ್ತವಾಗಿದೆ ಎಂದು ಹರಪನಹಳ್ಳಿ ತಾಲೂಕಿನ 60 ವರ್ಷದ ಶಿವಮ್ಮ ಪತ್ರಿಕೆಯೊಂದಿಗೆ ಹರ್ಷದಿಂದ ಮಾತನಾಡಿದರು.
ಅಮಾವಾಸ್ಯೆ ನಿಮಿತ್ತ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಭಕ್ತರಿಗೆ, ಸ್ತ್ರೀ ಶಕ್ತಿ ಯೋಜನೆ ಹಿನ್ನೆಲೆ ಹರಪನಹಳ್ಳಿ ಡಿಪೋದಿಂದ ಕೊಟ್ಟೂರಿಗೆ ಸರಿಸುಮಾರು 60 ರಿಂದ 70 ಟ್ರಿಪ್ ಬಸ್ ಗಳನ್ನು ಇಂದು ಬಿಟ್ಟಿದೆ ಎಲ್ಲಾ ಬಸ್ ನು ಫುಲ್ ತುಂಬಿಕೊಂಡು ಹೋಗಿವೆ, ನಿಲ್ದಾಣ ಕೆಲ ಹೊತ್ತು ಫುಲ್ ಟ್ರಾಫಿಕ್, ನಿರ್ಮಾಣವಾಗಿತ್ತು .
ನಿಲ್ದಾಣ ವ್ಯವಸ್ಥಾಪಕರು, ಹರಪನಹಳ್ಳಿ