
ಕಲಬುರಗಿ: ಫೆ.23: ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ವಿಶೇಷವಾಗಿ ಈ ವಿಭಾಗದ ಏಳು ಜಿಲ್ಲೆಯ ಸ್ತಬ್ದ ಚಿತ್ರಗಳು ಈ ಭಾಗದ ಮತ್ತು ಆಯಾ ಜಿಲ್ಲೆಗಳ ಪ್ರತಿನಿಧಿಸುತ್ತಿದ್ದು, ಆಯಾ ಜಿಲ್ಲೆಗಳ ವಿಶೇಷಗಳನ್ನು ಉತ್ಸವದಲ್ಲಿ ತೆರೆದಿಟ್ಟಿವೆ. ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಜಿಲ್ಲೆಯನ್ನು ಪ್ರತಿನಿಧಿಸುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸ್ತಬ್ದ ಚಿತ್ರ (ಟ್ಯಾಬ್ಲೋ) ಉತ್ಸವಕ್ಕೆ ಕಳೆ ಗಟ್ಟಿದೆ.
ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿಯ ಸ್ತಬ್ಧಚಿತ್ರವು ಈಶಾನ್ಯ ವಲಯ ಅಂದರೆ ಹೈದ್ರಾಬಾದ್ ಕರ್ನಾಟಕವು “ಕಲ್ಯಾಣ ಕರ್ನಾಟಕ”ವಾಗಿರುವುದನ್ನು ಬಿಂಬಿಸುವಂತಿದೆ.
ಈ ಸ್ತಬ್ದಚಿತ್ರವು ಹಲವು ವೈಶಿಷ್ಠ್ಯಗಳನ್ನು ಬಿಂಬಿಸುತ್ತಿದ್ದು, ಈ ಭಾಗದಲ್ಲಿನ ಅಭಿವೃದ್ಧಿಯ ಏರುಗತಿಯನ್ನು ಸುಷ್ಪಷ್ಟವಾಗಿ ಬಿಂಬಿಸುವಂತಿರುವುದು ವಿಶೇಷ: ಇವುಗಳ ವಿಶೇಷ ಇಂತಿದೆ:
ಕಲಬುರಗಿ ವಿಮಾನ ನಿಲ್ದಾಣ : ಕಲಬುರಗಿ ವಿಮಾನ ನಿಲ್ದಾಣಕ್ಕೆ 58.52 ಕೋಟಿ ರೂ.ಗಳು, ಬೀದರ ವಿಮಾನ ನಿಲ್ದಾಣಕ್ಕೆ 5.00 ಕೋಟಿ ರೂ.ಗಳು, ರಾಯಚೂರು ವಿಮಾನ ನಿಲ್ದಾಣಕ್ಕೆ 54.56 ಕೋಟಿ ರೂ. ಗಳು ಅನುದಾನವನ್ನು ಮಂಡಳಿಯಿಂದ ಮಂಜೂರಾತಿ ನೀಡಿ ವಿವರ ಸಾರುತ್ತಿದೆ.
ಇನ್ನುಳಿದಂತೆ ಏಳು ಜಿಲ್ಲೆಗಳಿಗೆ ನೀಡಿದ ಸೌಲತ್ತುಗಳು ಅನುದಾನಗಳ ಸಚಿತ್ರ ವಿವರವನ್ನು ಈ ಸ್ತಬ್ದ ಚಿತ್ರ ಒಳಗೊಂಡಿದೆ ಇದರಲ್ಲಿ ಸ್ಮಾರ್ಟಕ್ಲಾಸ್: ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ, ಅಂಗನವಾಡಿ, ಅಂಬ್ಯಲೆನ್ಸ್, ವೈದ್ಯಕೀಯಉಪಕರಣಗಳು ತಾರಾಲಯ ಗಳು ಒದಗಿಸಿದ ಮಂಡಳಿಯ ಕಾರ್ಯಗಳನ್ನು ಈ ಚಿತ್ರ ಬಿಂಬಿಸುತ್ತಿರುವುದು ವಿಶೇಷ.
ಬೀದರ ಜಿಲ್ಲೆ: ಬೀದರನ ಹೊಸ ಆಕರ್ಷಣೆ ಹಾಗೂ ಭವಿಷ್ಯದ ಅಂತಾರಾಷ್ಟ್ರೀಯ ಸ್ಮರಕವಾಗುವ ನಿಟ್ಟಿನಲ್ಲಿ ಸಿದ್ದಗೊಳ್ಳುತ್ತಿರುವ ಅನುಭವ ಮಂಟಪವನ್ನು ಬಿಂಬಿಸುತ್ತಿರುವ ಬೀದರದ ಸ್ತಬ್ದಚಿತ್ರ ಆಕರ್ಷಣೀಯವಾಗಿದೆ. 12ನೇ ಶತಮಾನದ ಗತವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸಿದ್ದಗೊಳ್ಳುತ್ತಿರುವ, ಅಂದಾಜು 25 ಎಕರೆ ಪ್ರದೇಶದಲ್ಲಿ 500 ಕೋಟಿ ವೆಚ್ಚದಲ್ಲಿ 182 ಅಡಿ ಎತ್ತರ 6 ಅಂತಸ್ತಿನ ಭವ್ಯ ಕಟ್ಟದಲ್ಲಿ 770 ಅಮರ ಗಣಂಗಳ ಪೀಠವೊಳಗೊಂಡಿರುವ ಪ್ರಪಂಚದ ಮೊದಲ ಸಂಸತ್ತು ಇಂದಿನ ಸಂಸತ್ತಿನ 770 ಸಂಸದರು ಒಳಗೊಂಡ ಪಾರ್ಲಿಮೆಂಟ್ ಕಟ್ಟಡದಂತೆ ಸಿದ್ದಗೊಳ್ಳುತ್ತಿರುವುದನ್ನು ಬಿಂಬಿಸುತ್ತಿದೆ!
ಕಲ್ಬುರ್ಗಿ ಜಿಲ್ಲೆ : ಕಲ್ಬುರ್ಗಿ ಜಿಲ್ಲೆಯ ಸ್ತಬ್ದ ಚಿತ್ರವು ಅಶೋಕನ ಕಾಲದಲ್ಲಿನ ಜೀವಂತ ಬದುಕು ಕಂಡ ಈ ನೆಲವಾದ ಕನಗನ ಹಳ್ಳಿಯ ಚಿತ್ರ ಹಾಗೂ ಸಿಮೆಂಟ್ ಫ್ಯಾಕ್ಟರಿಗಳನ್ನೊಳಗಂಡ ಚಿತ್ರ ಚಿತ್ತಾಕರ್ಷಕವಾಗಿದೆ.
ಯಾದಗಿರಿ ಜಿಲ್ಲೆ: ಯಾದಗಿರಿಜಿಲ್ಲೆಯಐತಿಹಾಸಿಕಸ್ಮಾರಕಗಳು, ಒಳಗೊಂಡಿದೆ. ಕಲ್ಯಾಣ ಕರ್ನಾಟಕ ಏಕೀಕರಣದ ನಾಯಕರ ಮಾಹಿತಿ ಸೇರಿದಂತೆ ಐತಿಹಾಸಿಕ ಹಿನ್ನೆಲೆಯನ್ನು ಸಾರುವ ಯಾದಗಿರಿ ಕೋಟೆ, ಸುರಪುರದ ಅರಸು ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಹೈದ್ರಾಬಾದ್ ನಿಜಾಮರ ಮತ್ತು ರಜಾಕರ ವಿರುದ್ಧ ಹೋರಾಟ ಮಾಡಿದ ದಿ. ಶ್ರೀ ವಿದ್ಯಾಧರ ಗುರುಜಿ ದಿ.ಶ್ರೀವಿಶ್ವನಾಥರೆಡ್ಡಿ ಮುದ್ನಾಳ ಸೇರಿದಂತೆ ದಿ.ಕೋಲೂರು ಮಲ್ಲಪ್ಪ ಇತರರ ಭಾವಚಿತ್ರಗಳು ಗಮನ ಸೆಳೆಯುತ್ತವೆ. ಒಟ್ಟಾರೆ ಜಿಲ್ಲೆಯ ಐತಿಹಾಸಿಕ ಪ್ರವಾಸೋದ್ಯಮಕ್ಕೆ ಇಂಬು ನೀಡುವಂತಹ ಸಂಗತಿಗಳನ್ನು ಒಳಗೊಂಡು ತನ್ನದೇ ಇತಿಹಾಸ ಸಾರುತ್ತಿದೆ.
ರಾಯಚೂರ ಜಿಲ್ಲೆ: ರಾಯಚೂರನ್ನು ಪ್ರತಿಬಿಂಬಿಸುವ ರಾಯಚೂರು ನಗರದ ನೌರಂಗಿ ದರವಾಜವು ಇಲ್ಲಿನ ವಿಶೇಷವಾಗಿದ್ದು ಗತ ಇತಿಹಾಸವನು ಸಾರಿ ಹೇಳುತ್ತಿದೆ.
ಕೊಪ್ಪಳ ಜಿಲ್ಲೆ: ಕೊಪ್ಪಳ ಜಿಲ್ಲೆಯ ಸ್ತಬ್ದಚಿತ್ರವು ಕಿನ್ನಾಳದ ಕಲೆ ಹಾಗೂ ಕೈಮಗ್ಗಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳದ ಸಿರಿಯನ್ನು ಸಾರುವ ಸ್ತಬ್ದ ಚಿತ್ರ ಅಲ್ಲಿನ ಕಲೆ ಹಾಗೂ ಸಂಸ್ಕøತಿಯನ್ನು ಢಾಳಾಗಿ ಬಿಂಬಿಸುತ್ತಿರುವುದು ವಿಶೇಷವಾಗಿದೆ.
ವಿಜಯ ನಗರ ಜಿಲ್ಲೆ: ನೂತನವಾಗಿ ಉದಯಿಸಿದ ವಿಜಯನಗರ ಜಿಲ್ಲೆಯು ಐತಿಹಾಸಿಕವಾಗಿ ಚಿರಪರಿಚಿತವಾಗಿರುವ ಅತ್ಯಂತ ಶ್ರೀಮಂತಿಕೆಯ ವೈಭವವನ್ನು ಮೆರೆದ ಹಂಪಿಯನ್ನು ಬಿಂಬಿಸುವ ಸ್ತಬ್ದ ಚಿತ್ರ ಗತವೈಭವವನ್ನು ಸಾರುತ್ತಿದೆ.
ಬಳ್ಳಾರಿ ಜಿಲ್ಲೆ: ಬಳ್ಳಾರಿ ಪ್ರತಿನಿಧಿಸುವ ಆರಾಧ್ಯ ದೇವತೆ ಶ್ರೀಕನಕದುರ್ಗಮ್ಮದೇವಸ್ಥಾನ ಸ್ತಬ್ದಚಿತ್ರ. ಬಳ್ಳಾರಿ ನಗರದ ಆರಾಧ್ಯ ದೇವತೆ ಶ್ರೀಕನಕದುರ್ಗಮ್ಮ ದೇವಸ್ಥಾನ ಬಳ್ಳಾರಿಕೋಟೆ ಮಿಂಚೇರಿ ಕಾಯ್ದಿಟ್ಟ ಅರಣ್ಯದ ಬ್ರಿಟಿμï ಕಾಲದ ಹಳೆಯ ನ್ಯಾಯಧೀಶರ ಬಂಗಲೆ ಒಳಗೊಂಡಿದ್ದು ಜಿಲ್ಲೆಯ ಪರಿಚಯ ಮಾಡಿಕೊಡುತ್ತಿದೆ ಎಂದು ಈ ಎಲ್ಲ ಸ್ತಬ್ದ ಚಿತ್ರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಲ್ಬುರ್ಗಿ ಜಿಲ್ಲಾ ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರೂ ಆದ ಸ್ತಬ್ದ ಚಿತ್ರಗಳ ನೋಡಲ್ ಅಧಿಕಾರಿ ಅಬ್ದುಲ್ ಅಜಿಮ್ ಅವರು ತಿಳಿಸಿದ್ದಾರೆ.