
(ಸಂಜೆವಾಣಿ ವಾರ್ತೆ)
ವಿಜಯಪುರ:ಆ.9: ತಾಯಂದಿರು ಶಿಶುಗಳಿಗೆ ಸ್ತನ್ಯಪಾನ ಮಾಡಿಸುವುದರಿಂದ ಮಕ್ಕಳು ಸದೃಡವಾಗಿ ಬೆಳೆಯಲು ಸಾಧ್ಯ ಎಂದು ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಶ್ರೀಶೈಲ ಗಿಡಗಂಟಿ ಹೇಳಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೌಮಾರಭೃತ್ಯ, ಪ್ರಸೂತಿ ತಂತ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ್ಯಪಾನದ ವಿಧಿ-ವಿಧಾನಗಳ ಕುರಿತು ತಾಯಂದಿರಿಗೆ ವಿವರವಾಗಿ ಮಾಹಿತಿ ನೀಡಿದ ಅವರು, ಸ್ತನ್ಯಪಾನದ ಕುರಿತು ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದರು.
ಇದಕ್ಕೂ ಮುಂಚೆ ನಡೆದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೀಪಾಕ್ಷಿ, ಜಾನಕಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಜುಂಜುನ್ವಾಡ ಸಸಿಗೆ ನೀರುಣಿಸುವ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ನಾನಾ ಬಡಾವಣೆಗಳ ಆಶಾ ಕಾರ್ಯಕರ್ತೆಯರು ಮತ್ತು ತಾಯಂದಿರು ಪಾಲ್ಗೊಂಡಿದ್ದರು. ಪ್ರಸವದ ನಂತರ ಎದೆಹಾಲು ಕಡಿಮೆ ಇರುವ 60 ಜನ ತಾಯಂದಿರಿಗೆ ಎದೆಹಾಲು ವರ್ದನೆಗೆ ಆಯುರ್ವೇದದ ವಿಶೇಷ ಔಷದ ಶತಾವರಿ ಚೂರ್ಣವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಡಾ. ಅಶೋಕ ವಾಲಿ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ವಿಜಯಲಕ್ಷ್ಮಿ ಹಾದಿಮನಿ, ಡಾ. ಜಾವೇದ ಬಾಗಾಯತ ಮುಂತಾದವರು ಉಪಸ್ಥಿತರಿದ್ದರು.
ಡಾ. ದೌಲ್ಬಿ ಚೌದ್ರಿ ಸ್ವಾಗತಿದರು. ಡಾ. ಪ್ರತಿಕ್ಷ ಕಂಬಾರ ವಂದಿಸಿದರು. ಅಮರನಾಥ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜಕುಮಾರ ವಾಲಿ ನಿರ್ವಹಿಸಿದರು.