ಸ್ಡಾರ್ ಸ್ಪೋರ್ಟ್ಸ್ ವೀಕ್ಷಕರ ಸಂಖ್ಯೆ 31.57 ದಶಲಕ್ಷಕ್ಕೆ ಏರಿಕೆ

ದುಬೈ, ನ .20- ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸ್ಟಾರ್ ಟಿವಿ ವೀಕ್ಷಕರ ಸಂಖ್ಯೆ 31.57 ದಶಲಕ್ಷದವರೆಗೆ ತಲುಪಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 13ನೇ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರಿಸಲಾಗಿತ್ತು. ಅದರೆ‌ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದಾಗಿ ಸ್ಟಾರ್ ಸ್ಪೋರ್ಟ್ಸ್ ವೀಕ್ಷಕರ‌ ಸಂಖ್ಯೆ ಶೇ 23 ರಷ್ಟು ಹೆಚ್ಚಲವಾಗಿದೆ ಎಂದು ಬಾರ್ಕ್ ಅಂಕಿ ಅಂಶ ಬಿಡುಗಡೆ ಮಾಡಿದೆ.
ಕನ್ನಡ, ಹಿಂದಿ, ಬೆಂಗಾಲಿ, ತಮಿಳು ಮತ್ತು ತೆಲುಗು ಪ್ರಾಂತೀಯ ಭಾಷೆಗಳಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದರಿಂದ ಟಿಆರ್ ಪಿ ಹೆಚ್ಚಳವಾಗಿದೆ ಎಂದು ಭಾರತೀಯ ವೀಕ್ಷಕ ಸಂಶೋಧನಾ ಮಂಡಳಿ(ಬಾರ್ಕ್ ) ತಿಳಿಸಿದೆ.
ಶೇ 24ರಷ್ಟು ವೀಕ್ಷಕರ ಸಂಖ್ಯೆ ಹೆಚ್ಛಳವಾಗಲು ಕಾರಣ ಏನೆಂದರೆ ಶೇ 20ರಷ್ಟು ಮಕ್ಕಳು ಹಾಗೂ ಮಹಿಳೆಯರು ವೀಕ್ಷಿಸಿರುವುದು ವಿಶೇಷ ಎಂದು‌ ಸ್ಟಾರ್ ಸ್ಪೋರ್ಟ್ಸ್ ನ ಮುಖ್ಯಸ್ಥ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದಿತ್ತು. ಆದರೆ ಕೊರೊನಾದಿಂದಾಗಿ ಈ ಬಾರಿಯ ಐಪಿಎಲ್ ನ 13 ನೇ ಆವೃತ್ತಿ ನಡೆಯುವುದೆ ಅನುಮಾನವಾಗಿತ್ತು. ಬಿಸಿಸಿಐ ಐಪಿಎಲ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಿತ್ತು.