ಸ್ಟ್ರಾಂಗ್ ರೂಂ ಸುತ್ತ ಬಂದೋಬಸ್ತ್

ತಿ.ನರಸೀಪುರ. ಡಿ.29 -ತಾಲೂಕಿನ 36 ಗ್ರಾ.ಪಂ.ಗಳಿಗೆ ಭಾನುವಾರ ನಡೆದ ಚುನಾವಣೆಯ ಮತಪೆಟ್ಟಿಗೆಗಳನ್ನು ಪಟ್ಟಣದ ಶಿವಾನಂದ ಶರ್ಮ ಪ್ರಾಥಮಿಕ ಶಾಲೆಯಲ್ಲಿ ಇರಿಸಲಾಗಿದ್ದು ಬಿಗಿ ಪೆÇೀಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾಳೆ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ 36 ಗ್ರಾ.ಪಂ.ಯ 243 ಬೂತ್ ಗಳನ್ನು ಶಾಲೆಯ 4 ಕೊಠಡಿಗಳಲ್ಲಿ ಭದ್ರವಾಗಿರಿಸಲಾಗಿದೆ.ಬುಧವಾರ ಬೆಳಿಗ್ಗೆ ಮತ ಎಣಿಕೆ ಕಾರ್ಯ ಆರಂಭಗೊಂಡು ಸಂಜೆಯವರೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.ಮತ ಎಣಿಕೆ ನಡೆಯುವ ಶಾಲೆಯ ಮುಂಭಾಗ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲಾಗಿದೆ.
ಮತ ಎಣಿಕೆ ಮಾಡಲು 80 ಟೇಬಲ್ ಗಳನ್ನು ಹಾಕಲಾಗಿದ್ದು ಪ್ರತಿ ಟೇಬಲ್ ಗೆ ಒಬ್ಬರು ಸೂಪರಿಂಟೆಂಡೆಂಟ್ ಹಾಗು ಒಬ್ಬರು ಸಹಾಯಕರನ್ನು ನಿಯೋಜಿಸಿ ಎಣಿಕೆ ಸುಸೂತ್ರವಾಗಿ ಮುಗಿಯಲು ಕ್ರಮ ಕೈಗೊಳ್ಳಲಾಗಿದೆ.
36 ಗ್ರಾ.ಪಂ ಯಲ್ಲಿ ಅಧೃಷ್ಟ ಪರೀಕ್ಷೆಗೆ ಮುಂದಾಗಿರುವ 1560 ಅಭ್ಯರ್ಥಿಗಳ ಭವಿಷ್ಯ ಬುಧವಾರ ಸಂಜೆ ಒಳಗೆ ನಿರ್ಧಾರವಾಗಲಿದ್ದು ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.