ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ

30ರಂದು ಅಭ್ಯರ್ಥಿಗಳ ತೀರ್ಪು ಎದೆಯಲ್ಲಿ ಡವಡವ
ನಂಜನಗೂಡು, ಡಿ.28: ಇದೇ ತಿಂಗಳು 27 ರಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಪೆÇಲೀಸ್ ಭದ್ರತೆಯಿಂದ ಭದ್ರವಾಗಿದೆ.
ಕಳೆದ 20 ದಿನಗಳಿಂದ ಪ್ರತಿ ಗ್ರಾಮದ ಪಡ ಶಾಲೆಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲೂ ಗ್ರಾಮಪಂಚಾಯಿತಿಯ ಕಾವು ವಿಪರೀತವಾಗಿತ್ತು ಚುನಾವಣೆ ನಡೆದು ಗ್ರಾಮಗಳಲ್ಲಿ ಶಾಂತರೀತಿಯಿಂದ ಗ್ರಾಮಗಳಿವೆ ಇಂದಿನಿಂದ ಲೆಕ್ಕಾಚಾರ ಶುರುವಾಗಿದೆ.
ಜಿದ್ದಾಜಿದ್ದಿನ ನಡೆದ ಈ ಚುನಾವಣೆ ಗೆಲುವು ಸೋಲುಗಳ ಲೆಕ್ಕಾಚಾರ ಶುರುವಾಗಿದೆ
ಪದವಿಪೂರ್ವ ಜ್ಯೂನಿಯರ್ ಕಾಲೇಜಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಪೆÇಲೀಸ್ ಭದ್ರತೆಯಿಂದ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ ಲೆಕ್ಕಾಚಾರ ಅಂದರೆ ಗ್ರಾಮಗಳಲ್ಲಿ ಕಡಿಮೆ ಹೆಚ್ಚು ಅಂತರ ಗೆಲುವು-ಸೋಲು ಲೆಕ್ಕಾಚಾರ ಹರಿದಾಡುತ್ತಿದೆ ಜೊತೆಗೆ ಕೆಲವು ಗ್ರಾಮಗಳಲ್ಲಿ ತೀರ ಪೈಪೆÇೀಟಿ ನೀಡಿರುವ ಗ್ರಾಮಗಳಲ್ಲಿ ಬೆಡ್ಡಿಂಗ್ ಬರಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ ಒಟ್ಟಿನಲ್ಲಿ ಬಹಳ ಕುತೂಹಲದಿಂದ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದೆ
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರುಗಳು ತಮ್ಮ ತಮ್ಮ ಕಚೇರಿಗಳಲ್ಲಿ ಕುಳಿತು ಪ್ರತಿ ಗ್ರಾಮಗಳಲ್ಲಿ ಮಾಹಿತಿ ಪಡೆದು ನಮ್ಮ ಪಕ್ಷದ ಅಭ್ಯರ್ಥಿಗಳು ಎಷ್ಟು ಗೆಲ್ಲಬಹುದು ಎಷ್ಟು ಸೋಲಬಹುದು ಎರಡು ಪಕ್ಷದ ಮುಖಂಡರುಗಳು ಮಾಹಿತಿ ಪಡೆದು ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮಾಡುವ ಸುದ್ದಿ ಕೂಡ ಶುರುವಾಗಿದೆ ಎಂದು ತಿಳಿದುಬಂದಿದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಕ್ಯಾಟಗಿರಿ ಬರುವುದನ್ನು ಕೂಡ ನಿರೀಕ್ಷೆಯಲ್ಲಿ ಕಾಣುತ್ತಿದ್ದಾರೆ ಒಟ್ಟಾರೆ ಅಭ್ಯರ್ಥಿಗಳ ಭವಿಷ್ಯ ಇದೇ ತಿಂಗಳು 30ರಂದು ಹೊರಬೀಳಲಿದೆ ಅಭ್ಯರ್ಥಿಗಳು ಟೆಂಪಲ್ ರನ್ ಶುರುಮಾಡಿದ್ದಾರೆ.