
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.11: ಸ್ಟ್ರಾಂಗ್ ರೂಂಗೆ ಮೂರು ಹಂತದ ಭದ್ರತೆ ನಿಯೋಜನೆ ಮಾಡಲಾಗಿದೆಂದು ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಹೇಳಿದ್ದಾರೆ.
ನಗರದ ಆರ್ ವೈ ಎಂ ಇಂಜಿನೀಯರಿಂಗ್ ಕಾಲೇಜಿನಲ್ಲಿ ರಚಿಸಿರುವ ಸ್ಟ್ರಾಂಗ್ ರೂ ಭದ್ರತೆ ಪರಿಶೀಲನೆ ಮಾಡಿ ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಐಟಿಬಿಟಿ, ಡಿಎಅರ್, ಸಿವಿಲ್ ಪೊಲೀಸ್ ಸೇರಿದಂತೆ ಮೂರು ಹಂತದ ಭದ್ರತೆ ನಿಯೋಜನೆ ಮಾಡಲಾಗಿದೆ.ಇಂದು
ಬೆಳಿಗಿನ ಜಾವದವರೆಗೂ ಡಿಮಸ್ಟ್ರಿಂಗ್ ಕಾರ್ಯ ನಡೆದಿದೆ. ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದೆ. ಯಾವುದೇ ಅಹಿಕರ ಘಟನೆ ನಡೆದಿಲ್ಲವೆಂದರು.