ಸ್ಟ್ರಾಂಗ್ ರೂಂಗಳಿಗೆ ಸರ್ಪಗಾವಲು

ಮತ ಯಂತ್ರಗಳನ್ನು ಇರಿಸಿರುವ ಜಯನಗರದ ಎಸ್.ಎಸ್.ಎಂ ಆರ್.ವಿ ಕಾಲೇಜಿನ ಸುತ್ತಲೂ ಕೇಂದ್ರ ಮೀಸಲು ಪಡೆ ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ನಿಗಾವಹಿಸಿರುವುದು.

ಬೆಂಗಳೂರು,ಮೇ.೧೧- ರಾಜ್ಯ ವಿಧಾನಸಭೆ ಚುನಾವಣೆ ಮತದಾನವು ಇವಿಎಂ ಮತಯಂತ್ರಗಳಲ್ಲಿ ೨,೬೧೫ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
ಮೇ.೧೩ ರಂದು ಬೆಳಗ್ಗೆ ೮ ಗಂಟೆಯಿಂದ ಮತ ಏಣಿಕೆ ನಡೆಯಲಿದ್ದು, ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ನಗರದ ೨೮ ಕ್ಷೇತ್ರಗಳಿಗೆ ನಾಲ್ಕು ಕಡೆ ಸ್ಟ್ರಾಂಗ್ ರೂಮ್‌ಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು, ಬಸವನಗುಡಿಯ ಬಿಎಂಎಸ್ ಕಾಲೇಜು, ಜಯನಗರದ ಎಸ್ ಎಸ್ ಎಂಆರ್ ವಿ ಕಾಲೇಜು, ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾಲೇಜು ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಸ್ಥಳೀಯ ಪೊಲೀಸರು ಹಾಗೂ ಬಿಎಸ್‌ಎಫ್ ಸಿಬ್ಬಂದಿಯಿಂದ ಭದ್ರತೆ ಮಾಡಲಾಗಿದ್ದು, ಒಂದೊಂದು ಸ್ಟ್ರಾಂಗ್ ರೂಮ್ ಬಳಿ ೧೦೦ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಸ್ಟ್ರಾಂಗ್ ರೂಮ್ ಬಳಿ ಓರ್ವ ಡಿಸಿಪಿ, ೫ ಎಸಿಪಿ, ೧೦ ಇನ್ಸ್‌ಪೆಕ್ಟರ್ ೧೦೦ ಪೊಲೀಸರು ಸೇರಿ ಸ್ಟ್ರಾಂಗ್ ರೂಂ ಸಮೀಪ ಕೆಎಸ್‌ಆರ್‌ಪಿ ತುಕಡಿ ಸಹ ನಿಯೋಜನೆ ಮಾಡಲಾಗಿದೆ.