
ಕಮಲನಗರ:ಎ.18: ತಾಲೂಕಿನ ಚಿಮೇಗಾಂವ್ ಕ್ರಾಸ್ ಹತ್ತಿರ ಸ್ಥಾಪಿಸಲಾಗಿರುವ ‘ಮೇಘನಾ ಸ್ಟೋನ್ ಕ್ರಷರ್ ಮತ್ತು ಎಂ ಸ್ಯಾಂಡ್’ ಘಟಕದ ಉದ್ಘಾಟನಾ ಸಮಾರಂಭದಲ್ಲಿ ರವೀಂದ್ರ ಸ್ವಾಮಿ ಭಾಗವಹಿಸಿದ್ದರು. ಇದರ ಯೋಜನಾ ನಿರ್ದೇಶಕ ವಿಜಯ ಬಿರಾದರ್ ರವರಾಗಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ರವೀಂದ್ರ ಸ್ವಾಮಿಯವರು, ‘ನಮ್ಮ ತಾಲೂಕಿನಲ್ಲಿ, ಔದ್ಯೋಗಿಕ ಕ್ಷೇತ್ರದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಿ ಉದ್ಯೋಗ ನೀಡುತ್ತಿರುವವರ ಸಂಖ್ಯೆ ಅತಿ ಕಡಿಮೆ ಇದೆ. ಆದರೆ, ವಿಜಯ್ ಬಿರಾದಾರ್ ರವರು ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ’ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಪೂಜ್ಯ ಚನ್ನವೀರ ಮಹಾಸ್ವಾಮೀಜಿ, ಸೋನಾಳ; ಪೂಜ್ಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೆಡಗಾಪುರ; ಪೂಜ್ಯ ಶಿವಯೋಗಿಶ್ವರ ರಾಜಯೋಗಿಂದ್ರ ಸ್ವಾಮೀಜಿ, ಭಾತಂಬ್ರಾ; ಪೂಜ್ಯ ಶಿವಾನಂದ ಸ್ವಾಮೀಜಿ, ಹುಲಸೂರ ರವರ ಜೊತೆಗೆ ಲೋಕಸಭಾ ಸದಸ್ಯ ಭಗವಂತ್ ಖೂಬಾ, ಶಿಂಧೆ ಭೀಮಸೇನ್ ರಾವ್, ಗುರುನಾಥ ಕೊಳ್ಳುರ್, ಸುಚಿತ್ರಾ ಹಂಗರಗೆ, ದೀಪಕ ಪಾಟೀಲ್ ಸೋನಾಳ, ಹನುಮಂತ ಪುಣೆ, ದೀಪಕ ಪಾಟೀಲ್ ಚಾಂದೋರಿ, ಚಂದ್ರಶೇಖರ ದೇಶಮುಖ್, ಬಂಡೆಪ್ಪ ಜಾಂತೆ ಹಾಗೂ ಹಲವು ಪ್ರಮುಖರು ಉಪಸ್ಥಿತರಿದ್ದರು.