ಸ್ಟೈಲ್ಸ್ ಹೋಂ ಉದ್ಘಾಟಿಸಿದ ನಂಜೇಗೌಡ, ದ್ರುವ ಸರ್ಜಾ

ಮಾಲೂರು.ನ೨೧-ಮಾಲೂರು-ಕೋಲಾರ ರಸ್ತೆಯ ಬಳಿ ಕೊಂಡಪ್ಪ & ಸನ್ಸ್ ಮಾಲೀಕತ್ವದ ಸ್ಟೈಲ್ಸ್ ಹೋಂ ಮಳಿಗೆಯನ್ನು ಕನ್ನಡ ಚಲಚಿತ್ರ ನಟ ದ್ರುವಸರ್ಜಾ ಹಾಗೂ ಶಾಸಕ ಕೆ.ವೈ.ನಂಜೇಗೌಡ ಉದ್ಘಾಟಿಸಿದರು.
ಚಲನಚಿತ್ರ ನಟ ಧ್ರುವಸರ್ಜಾ ಇಲ್ಲಿನ ಸ್ಟೈಲ್ಸ್ ಹೋಂನ ಮಾಲೀಕರ ಆಹ್ವಾನದ ಮೇರೆಗೆ ಉದ್ಘಾಟನೆಗೆ ಆಗಮಿಸಿದ್ದು, ನಾಗರೀಕರಿಗೆ ಅಗತ್ಯವಿರುವ ಗೃಹೋಪಯೋಗಿ ಅಡುಗೆ ಕೋಣೆಯ ವಸ್ತುಗಳು ಹಾಗೂ ವಿಧ ವಿಧವಾದ ನೆಲ ಹಾಸು, ಆಕರ್ಷಣೀಯವಾಗಿದೆ. ಅಭಿಮಾನಿಗಳ ಅಭಿಮಾನ ಹಾಗೂ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ, ಪ್ರತಿಯೊಬ್ಬ ಕನ್ನಡಿಗರು, ಚಿತ್ರಮಂದಿರಕ್ಕೆ ಹೋಗಿ ಕನ್ನಡ ಚಲನಚಿತ್ರಗಳನ್ನು ನೋಡುವ ಮೂಲಕ ಕನ್ನಡ ಚಲನಚಿತ್ರ ನಟ ನಟಿಯರನ್ನು ಆಶಿರ್ವದಿಸಬೇಕು. ಅದೇ ರೀತಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮುನ್ನೆಚ್ಚರಿಕೆಯಾಗಿ ಮಾಸ್ ದರಿಸಿ ಸಾಮಾಜಿಕ ಅಂತರ ಪಾಲಿಸಿ ಸ್ಯಾನಿಟೈಸರ್ ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಚಲನಚಿತ್ರ ನಟ ಧೃವಸರ್ಜಾ ಸ್ಟೈಲ್ಸ್ ಹೋಂ ಮಳಿಗೆ ಉದ್ಘಾಟಿಸಲು ಬರುವುದನ್ನು ತಿಳಿದ ಅವರ ಅಭಿಮಾನಿಗಳು ಪ್ರೀತಿಯ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಅಭಿಮಾನಿಗಳ ನೂಕು ನುಗ್ಗಲಿನಿಂದ ಗೊಂದಲ ಉಂಟಾಗಿತ್ತು. ಪೊಲೀಸರು ಜನಜಂಗುಳಿಯನ್ನು ಚದುರಿಸಲು ಹರಸಾಹಸ ಪಟ್ಟು ಲಘು ಲಾಠಿ ಪ್ರಹಾರ ನಡೆಸಿದರು.
ಸ್ಟೈಲ್ಸ್ ಹೋಂನ ಮಾಲೀಕ ರಾಜೇಂದ್ರ, ಮುಖಂಡರಾದ ತಬಲ ರಾಜು, ಶ್ರೀನಿವಾಸ್, ನಟ ಕಾರ್ತಿಕ್, ಇನ್ನಿತರರು ಹಾಜರಿದ್ದರು.