ಸ್ಟೇಷನ್ ಬಬಲಾದ ಜಾತ್ರೆ ರದ್ದು

ಕಲಬುರಗಿ:ಏ.18:ತಾಲ್ಲೂಕಿನ ಸ್ಟೇಷನ್ ಬಬಲಾದ್ ಗ್ರಾಮದಲ್ಲಿ ಏಪ್ರಿಲ್ 21ರ ಶ್ರೀರಾಮ ನವಮಿಯಂದು ಜರುಗಬೇಕಾಗಿದ್ದ ಶ್ರೀ ಮಲ್ಲಿಕಾರ್ಜುನ್ ಬ್ರಹ್ಮಠದ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವ ಶ್ರೀ ರಾಮನ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಕೊರೋನಾ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಯಲ್ಲಿ ರಥೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯಸ್ವಾಮಿಗಳು ತಿಳಿಸಿದ್ದಾರೆ.
ಸದ್ಭಕ್ತರೆಲ್ಲರ ಜೊತೆಗೆ ಸಮಾಲೋಚಿಸಿ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಸಾರ್ವಜÀನಿಕರು ಶ್ರೀ ಮಠದ ಸದ್ಭಕ್ತರೆಲ್ಲರೂ ಸಹಕರಿಸಬೇಕು. ಕೊರೋನಾ ಸೊಂಕು ನಿಯಂತ್ರಣಕ್ಕೆ ಕೋವಿಡ್ ನಿಯಮ ಪಾಲಿಸಬೇಕೆಂದು ತಮ್ಮ ತಮ್ಮ ಮನೆಯಲ್ಲಿಯೇ ಶ್ರೀ ಮಲ್ಲಿಕಾರ್ಜುನನ್ನು ಆರಾಧಿಸಬೇಕೆಂದು ಶ್ರೀಗಳು ಕರೆಕೊಟ್ಟಿದ್ದಾರೆ.