ಸ್ಟೇರ್‍ಕೇಸ್ ಮೇಲಿಂದ ಬಿದ್ದು ಬಾಲಕ ಸಾವು

ಕಲಬುರಗಿ,ಏ.25-ಆಟವಾಡುತ್ತಿದ್ದ ವೇಳೆ ಮನೆಯ ಸ್ಟೇರ್‍ಕೇಸ್ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.
ಮಹ್ಮದ್ ಅರ್ಹಮ್ ತಂದೆ ಶೇಖ್ ಅಬ್ದುಲ್ ವಾಹೀದ್ (13) ಮೃತಪಟ್ಟ ಬಾಲಕ.
ರಂಜಾನ್ ಹಬ್ಬದ ದಿನ ಮಹ್ಮದ್ ಅರ್ಹಮ್ ಆಟವಾಟುತ್ತಿದ್ದ ವೇಳೆ ಮನೆಯ ಸ್ಟೇರ್‍ಕೇಸ್ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.