ಬೇಕಾಗುವ ಪದಾರ್ಥಗಳು:
ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆ
ಅಚ್ಚಖಾರದಪುಡಿ
ಚಿಟಿಕೆ ಆಮ್ ಚೂರು ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಕಾಳುಮೆಣಸಿನಪುಡಿ
ಹಸಿರು ಬಣ್ಣದ ಬೋಂಡಾ ಮೆಣಸಿನಕಾಯಿ
ಎಣ್ಣೆ ಸ್ವಲ್ಪ
ವಿಧಾನ: ಆಲೂಗೆಡ್ಡೆಗೆ ಅಚ್ಚಖಾರದಪುಡಿ, ಆಮ್ ಚೂರುಪುಡಿ, ಉಪ್ಪು, ಕಾಳುಮೆಣಸಿನಪುಡಿ ಹಾಕಿ ಕಲೆಸಿ. ಈ ಮಿಶ್ರಣವನ್ನು ಬೀಜ ತೆಗೆದ ಬೋಂಡಾ ಮೆಣಸಿನಕಾಯಿ ಒಳಗೆ ತುಂಬಿ ಎಣ್ಣೆ ಹಾಕಿದ ಬಾಣಲೆಗೆ ಹಾಕಿ ಹೊರಳಿಸುತ್ತಾ ಬೇಯಿಸಬೇಕು. ಚಿಕ್ಕಚಿಕ್ಕ ದಪ್ಪಮೆಣಸಿನಕಾಯಿಯಲ್ಲಿಯೂ ಈ ರೀತಿ ಮಾಡಬಹುದು. ಬಿಸಿ ಇರುವಾಗಲೇ ಸೇವಿಸಬೇಕು.