ಸ್ಟುಡಿಯೋ ಪ್ರಾರಂಭಿಸಲು ಅನುಮತಿ ನೀಡಲು ಮನವಿ

ದಾವಣಗೆರೆ.ಏ.೨೪; ರಾಜ್ಯದಲ್ಲಿ ಮತ್ತು ದಾವಣಗೆರೆ ನಗರದಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಹೇರಿರುವ ಸರ್ಕಾರ ಬಾರ್ ಮತ್ತು ಬ್ಯೂಟಿ ಪಾರ್ಲರ್ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ ದೂರದಿಂದಲೇ ಸೇವೆ ನೀಡುವ ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಿಸುವುದಕ್ಕೆ ತುಂಬಾ ನಷ್ಟವಾಗುತ್ತದೆ ಎಂದು ಹಿರಿಯ ಛಾಯಾಗ್ರಾಹಕ ಎಂ.ಮನು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಕೋವಿಡ್ 19 ನಿಂದಾಗಿ ಬಹಳ ಸಾಲವನ್ನು ಮಾಡಿಕೊಡುತ್ತಾರೆ ಈ ವರ್ಷ ಅಲ್ಪಸ್ವಲ್ಪ ಮದುವೆ ಸಮಾರಂಭಗಳಲ್ಲಿ ಫೋಟೋ ಮತ್ತು ವಿಡಿಯೋ ಮಾಡಿ ಜೀವನ ನಡೆಸಲು ಕಾರಣ ಇದೇನೇ ನಂಬಿದ ದಾವಣಗೆರೆ ನಗರ ಮತ್ತು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬರುತ್ತದೆ ಸಾಲಸೋಲ ಮಾಡಿ ಹೊಸ ಹೊಸ ಕ್ಯಾಮರಗಳನ್ನು ಪಡೆದುಕೊಂಡಿದ್ದು ಕಳೆದ ವರ್ಷ ಮದುವೆ ಸಮಾರಂಭಗಳು ಇಲ್ಲದೆ ಛಾಯಾಗ್ರಾಹಕರ ಪರಿಸ್ಥಿತಿ ಬಹಳ ಕಠಿಣವಾಗಿದೆ ಈ ವರ್ಷ ಮದುವೆ ಸಮಾರಂಭಗಳು ಅರ್ಧಂಬರ್ಧ ಇದ್ದು ಸ್ಟುಡಿಯೋ ನಂಬಿ ಜೀವನ ನಡೆಸುತ್ತಿದ್ದು ಬ್ಯಾಂಕಿನ ಸಾಲ ಮಾಡಿಕೊಂಡಿರುತ್ತಾರೆ ಕುಟುಂಬದ ನಿರ್ವಹಣೆ ಹಾಗೂ ಸ್ಟುಡಿಯೋ ನೀಡಲು ಅವಕಾಶ ಮಾಡಿಕೊಡಬೇಕು.ಕೋವಿಡ್ 19 ನಿಂದಾಗಿ ಕಳೆದ ವರ್ಷವೂ ಲಾಕ್ಡೌನ್ ವೇಳೆ ಫೋಟೋಗಳು ಬಂದ್ ಆಗಿದ್ದವು ಮದುವೆ ಸಮಾರಂಭವು ಸರಿಯಾಗಿ ನಡೆಯದೆ ಛಾಯಾಗ್ರಾಹಕರ ಕೆಲಸ ಇಲ್ಲದೆ ನಷ್ಟ ಅನುಭವಿಸಿದ್ದೇವೆ ಈ ವರ್ಷ ರಾಜ್ಯ ಸರಕಾರ ಮದುವೆ ಸಮಾರಂಭಗಳಿಗೆ ಷರತ್ತು ಬದ್ಧ ಅವಕಾಶ ಕೊಟ್ಟು ಫೋಟೋ ಸ್ಟುಡಿಯೋ ಗಳನ್ನು ಬಂದ್ ಮಾಡಿ ಸೇರುತ್ತಿರುವುದರಿಂದ ಛಾಯಾಗ್ರಾಹಕರ ಕುಟುಂಬಗಳು ಬೀದಿಗೆ ಬಂದಿದ್ದಾರೆ. ಆದ್ದರಿಂದ ನಮಗೂ ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೂ ಮತ್ತು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ.