ಸ್ಟೀಮ್ ಫೇರ್ ಕಾರ್ಯಕ್ರಮ: ಹೆಸರು ನೋಂದಣಿಗೆ ಸೂಚನೆ

ಕಲಬುರಗಿ,ಮೇ.8:ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಇದೇ ಮೇ 16 ರಿಂದ 18 ರವರೆಗೆ (Science Technology Engineering Agriculture & Mathematics) “STEAM FAIR” “ಸ್ಟೀಮ್ ಫೇರ್” ಎಂಬ ವಿಜ್ಞಾನ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತಿಯುಳ್ಳ ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿದ್ಯಾಥಿಗಳು ಸ್ಟೀಮ್ ಫೇರ್ (STEAM FAIR) ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಮೊಬೈಲ್ ತಾರಾಲಯ ಪ್ರದರ್ಶನ, ಸ್ಪೇಸ್ ಆನ್ ವ್ಹಿಲ್, ಸೈನ್ಸ್ ಫಿಲಂ, 3ಡಿ ಸೈಟೆಕ್ ಚಲನಚಿತ್ರ ಪ್ರದರ್ಶನ (Mobile Planetarium shows, Space on Wheel, Science Films, 3D Scitech Movies Shows) ಇದಲ್ಲದೇ ವಿಜ್ಞಾನ ಮಾದರಿ ಪ್ರದರ್ಶನ (Science Model Exhibition) ಸ್ಪರ್ಧೆಯನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವಿಜ್ಞಾನ ಮಾದರಿ ಪ್ರದರ್ಶನ (Science Model Exhibition) ಸ್ಪರ್ಧೆಯಲ್ಲಿ ಆಯ್ಕೆಯಾದ ಅತ್ಯುತ್ತಮ ಮಾಡೆಲ್‍ಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ.

   ಕಾರ್ಯಕ್ರಮದಲ್ಲಿ ಭಾಗವಹಿಸಲು/ನೋಂದಾಯಿಸಿಕೊಳ್ಳಲು ಕಾರ್ಯಕ್ರಮದ ಸಂಘಟಕರಾದ ವಿ.ಕೆ.ಶ್ರೀನಿವಾಸು  ಇವರ ಮೊಬೈಲ್ ಸಂಖ್ಯೆ 9620767819, ಕೆ.ಸಿ.ಉಮೇಶ್ ಇವರ ಮೊಬೈಲ್ ಸಂಖ್ಯೆ 9008675123 ಗಳಿಗೆ ಸಂಪರ್ಕಿಸಲು ಕೋರಲಾಗಿದೆ. ಕಾರ್ಯಕ್ರಮದ ಕುರಿತು ಮತ್ತಿತರ ಹೆಚ್ಚಿನ ವಿವರಗಳನ್ನು ಅಕಾಡೆಮಿಯ    www.kstacademy.in  ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.